ನಿನ್ನೆ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಪ್ರತಿ ಗ್ರಾಂ ಚಿನ್ನದ ದರದಲ್ಲಿ ಸುಮಾರು ₹45 ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಪ್ರತಿ ಗ್ರಾಂಗೆ ₹5 ಕಡಿಮೆಯಾಗಿದೆ. ಭಾರತದಲ್ಲಿ ಚಿನ್ನದ ದರ ಇಳಿಕೆಯಾದರೂ, ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆಯಲ್ಲೇ ಮುಂದುವರಿದಿದೆ. ಇದರಿಂದ ಹೂಡಿಕೆದಾರರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸದ್ಯ ಭಾರತದಲ್ಲಿ 24 ಕ್ಯಾರಟ್ ನ 1 ಗ್ರಾಂ ಚಿನ್ನ ₹15,431. 22 ಕ್ಯಾರಟ್ ನ 1 ಗ್ರಾಂ ಚಿನ್ನ ₹14,145. 18 ಕ್ಯಾರಟ್ ನ 1 ಗ್ರಾಂ ಚಿನ್ನ ₹11,573 ಆಗಿದೆ. ಬೆಳ್ಳಿ 1 ಗ್ರಾಂ ಗೆ ₹325 ಇದೆ. 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 1,41,450 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,54,310 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 32,500 ರೂಪಾಯಿ ಇದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,41,450 ಇದ್ದರೆ, 100 ಗ್ರಾಂ ಬೆಳ್ಳಿ ಬೆಲೆ ₹32,500 ಆಗಿದೆ. ಆದರೆ ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 100 ಗ್ರಾಂಗೆ ₹34,000ರವರೆಗೆ ದಾಖಲಾಗಿದೆ. ಇನ್ನು 24 ಕ್ಯಾರಟ್ 1 ಗ್ರಾಂ ನ ಚಿನ್ನ ₹15,431. 22 ಕ್ಯಾರಟ್ ನ 1 ಗ್ರಾಂ ಚಿನ್ನ ₹14,145. ಹಾಗು ಬೆಳ್ಳಿ 1 ಗ್ರಾಂ ಗೆ ₹325 ಆಗಿದೆ.
ಚಿನ್ನ–ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು? ಅನ್ನೋದನ್ನ ನೋಡೋದಾದ್ರೆ ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎನ್ನುವ ನಂಬಿಕೆ ಮತ್ತಷ್ಟು ಬಲವಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ದೇಶೀಯ ಮಾರುಕಟ್ಟೆಯಷ್ಟೇ ಅಲ್ಲದೆ, ಜಾಗತಿಕ ಮಾರುಕಟ್ಟೆಗಳಲ್ಲೂ ಅಮೂಲ್ಯ ಲೋಹಗಳ ಬೇಡಿಕೆ ಹೆಚ್ಚುತ್ತಿದೆ. ಪೂರೈಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಹಾಗೂ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ದಾಸ್ತಾನು ಪ್ರಮಾಣವೂ ಹೆಚ್ಚಾಗುತ್ತಿದೆ.
ಇದಕ್ಕೆ ಜೊತೆಗೆ, ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ತನ್ನ ಸ್ವಾಧೀನಕ್ಕೆ ಪಡೆಯಲು ನಡೆಸುತ್ತಿರುವ ಪ್ರಯತ್ನ ಮತ್ತು ಅದಕ್ಕೆ ಯುರೋಪಿಯನ್ ಒಕ್ಕೂಟ ನೀಡಿರುವ ತೀವ್ರ ವಿರೋಧ ಜಾಗತಿಕ ವ್ಯಾಪಾರದಲ್ಲಿ ಅನಿಶ್ಚಿತತೆ ಉಂಟುಮಾಡಿದೆ. ಈ ರಾಜಕೀಯ–ಆರ್ಥಿಕ ಬೆಳವಣಿಗೆಗಳು ಚಿನ್ನ ಮತ್ತು ಬೆಳ್ಳಿ ಬೆಲೆಗೆ ಮತ್ತಷ್ಟು ಬೆಂಬಲ ನೀಡಿವೆ.
ವರದಿ : ಲಾವಣ್ಯ ಅನಿಗೋಳ




