Film News:
ದೇಶಿ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯರಾಗಿರುವ ಉಮೈರ್ ಸಂಧು ಎಂಬುವವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ರಣವೀರ್-ದೀಪಿಕಾ ಅಭಿಮಾನಿಗಳ ನಿದ್ದೆಗೆಡಿಸಿದೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಎಲ್ಲವೂ ಸರಿ ಇಲ್ಲ ಎಂದು ಉಮೈರ್ ಸಂಧು ಪೋಸ್ಟ್ ಮಾಡಿದ್ದಾರೆ. ಭಾರತದ ಸಿನೆಮಾ ವಿಮರ್ಶೆ ಮಾಡುವ ಸಂಧು ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ದಿ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಟ್ವೀಟ್ ಮಹತ್ವ ಪಡೆದುಕೊಂಡಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಣವೀರ್ ಸಿಂಗ್, 2012ರಲ್ಲಿ ನನ್ನ ಮತ್ತು ದೀಪಿಕಾ ನಡುವೆ ಡೇಟಿಂಗ್ ಶುರುವಾಗಿತ್ತು. ಈ ವರ್ಷಕ್ಕೆ ನಮ್ಮ ಡೇಟಿಂಗ್ ಜೀವನಕ್ಕೆ ಹತ್ತು ವರ್ಷವಾಯಿತು ಎಂದು ಹೇಳಿಕೊಂಡಿದ್ದರು. ಆದರೆ ಇದಾದ ಬಳಿಕ ನಿನ್ನೆಯಷ್ಟೇ ಸಂಧು ಮಾಡಿರುವ ಟ್ವೀಟ್ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅದೇನೇ ಇದ್ದರೂ, ಈ ಟ್ವೀಟ್‌ನ ನಿಜಾಂಶವೇನು ಎಂಬುದನ್ನು ಸ್ವತಃ ದೀಪಿಕಾ ಮತ್ತು ರಣವೀರ್ ಅವರೇ ಸ್ಪಷ್ಟಪಡಿಸಬೇಕಿದೆ ಎಂಬುವುದಷ್ಟೇ ಸತ್ಯ.
BREAKING ! Everything is not OK between #DeepikaPadukone & #RanveerSingh !!!
— Umair Sandhu (@UmairSandu) September 27, 2022
ಮಗು ಬಿಟ್ಟು ಬಂದಿದ್ದು ಸಂಬಂಧ ಬೆಳೋಸೋದಕ್ಕಲ್ಲ…?! ಮಯೂರಿ ಹೀಗಂದಿದ್ಯಾಕೆ..?!