Bellary News: ಬಳ್ಳಾರಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಪ್ರಕರಣಕ್ಕೆ, ಬಳ್ಳಾರಿಯಲ್ಲಿರುವ ಸಮೀರ್ ಮನೆಗೆ ಪೋಲೀಸರು ನೋಟೀಸ್ ಅಂಟಿಸಿದ್ದಾರೆ.
ಬೆಳ್ತಂಗಡಿ ಪೋಲೀಸರು ಬಳ್ಳಾರಿ ಮನೆಗೆ ನೋಟೀಸ್ ಅಂಟಿಸಿ, ನಾಾಳೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಬಳ್ಳಾರಿಯ ಕೌಲಬಜಾರ್ ವ್ಯಾಪ್ತಿಯ ಬಂಡಿ ಹಟ್ಟಿ ಪ್ರದೇಶದಲ್ಲಿ ಸಮೀರ್ ಮನೆ ಇದೆ. ಇದು ಹಳೇ ಮನೆಯಾಗಿದ್ದು, 2011ರಲ್ಲಿ ಸಮೀರ್ ಮನೆಯವರು ಈ ಮನೆ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದರು.
ಹಾಗಾಗಿ ಬಳ್ಳಾರಿ ಮತ್ತು ಬೆಂಗಳೂರು ಎರಡೂ ಮನೆಗೂ ಪೋಲೀಸರು ನೋಟೀಸ್ ಅಂಟಿಸಿದ್ದಾರೆ. ಮೊದಲಿಗೆ ಸೌಜನ್ಯ ವಿಡಿಯೋ ಮಾಡಿದಾಗ ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಗಲೂ ಇದೇ ಮನೆಗೆ ಬಂದಿದ್ದ ಪೊಲೀಸರು ನಂತರ ಬೆಂಗಳೂರಿಗೆ ತೆರಳಿ ನೋಟಿಸ್ ಕೊಟ್ಟಿದ್ರು. ಸದ್ಯ ಈ ಮನೆಯಲ್ಲಿ ಸಮೀರ್ ದೂರದ ಸಂಬಂಧಿ ಅಕ್ಕ ಭಾವ ಈ ಮನೆಯಲ್ಲಿ ವಾಸವಿರುತ್ತಾರೆ. ಘಟನೆ ಬಳಿಕ ಕುಟುಂಬ ಸದಸ್ಯರು ಯಾರು ಈ ಮನೆಯಲ್ಲಿ ಇಲ್ಲ.