ದೆಹಲಿ: ರಾಜ್ಯದಾನಿ ದೆಹಲಿಯಲ್ಲಿ ಯಾರು ಊಹಿಸದಂತಹ ದರೋಡೆಯೊಂದು ನಡೆದಿದೆ. ದೆಹಲಿಯ ಬೋಗಾಲ್ ಇನ್ನುವ ಪ್ರದೇಶದಲ್ಲಿ ಜನರಿಲ್ಲದ ವೇಳೆ ಬಲಿಷ್ಟವಾದ ಕೋಣೆಯ ಗೋಡೆಯನ್ನು ಕೊರೆದು ತೂತುಮಾಡಿ ಸುಮಾರು 25 ಕೊಟಿ ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲಿಕರು ತಿಳಿಸಿದರು.
ಭಾನುವಾರ ರಜೆ ಇರುವ ಕಾರಣ ಅಂಗಡಿಯನ್ನು ಮುಚ್ಚಲಾಗಿತ್ತು ನಂತರ ಮಂಗಳವಾರ ಅಂಗಡಿ ಬಾಗಿಲು ತೆರೆದಾಗ ಅಂಗಡಿ ತುಂಬಾ ದೂಳು ತುಂಬಿಕೊಂಡಿತ್ತು.ಮಹಡಿಯ ಮೇಲಿನಿಂದ ಬಂದ ಕಳ್ಳರು ಆಭರಣ ಇರುವ ಕೋಣೆಯ ಗೋಡೆಯನ್ನು ಕೊರೆದು ಅದರಲ್ಲಿರುವ ಸುಮಾರು 25 ಕೋಟಿ ಬೆಳೆಬಾಳುವ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ, ಹಾಗೂ ಸಿಸಿಟಿವಿಯನ್ನು ಹಾಳುಮಾಡಿ ಪರಾರಿ ಆಗಿದ್ದಾರೆ
ಇದೊಂದು ದೊಡ್ಡ ಕಳ್ಳತನವಾಗಿದ್ದು ಕಳ್ಳರು ಯಂತ್ರೋಪಕರಣಗಳ ಉಪಯೋಗಿಸಿ ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಷ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚೇ ತೀರುತ್ತೇವೆ: ಜೋಶಿಗೆ ಶೆಟ್ಟರ್ ಟಾಂಗ್..!
HD Revanna: ರಾತ್ರಿ ಹೊತ್ತು ಕದ್ದು ತಮಿಳುನಾಡಿಗೆ ನೀರು ಬಿಡುತ್ತಾರೆ; ಹೆಚ್ ಡಿ ರೇವಣ್ಣ..!