Sunday, December 1, 2024

Latest Posts

ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚೇ ತೀರುತ್ತೇವೆ: ಜೋಶಿಗೆ ಶೆಟ್ಟರ್ ಟಾಂಗ್..!

- Advertisement -

ಹುಬ್ಬಳ್ಳಿ: ಹುಬ್ಬಳ್ಳಿಯ ಸಾರ್ವಜನಿಕ ಗಣಪತಿ ವಿಸರ್ಜನೆ ದಿನ, ಡಿಜೆ ಹಚ್ಚುವ ವಿಚಾರ ತೀವ್ರ ಸ್ವರೂಪ ಪಡೆಯುತ್ತಿದೆ. ಒಂದು ಕಡೆ ಪೊಲೀಸ್ ಕಮೀಷನರ್ ಡಿಜೆ ಬ್ಯಾನ್ ಮಾಡಿದ್ರೆ ಇತ್ತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಡಿಜೆ ಹಚ್ಚೇ ಹಚ್ಚುತ್ತೇವೆಂದು ಪಣ ತೊಟ್ಟಿದ್ದಾರೆ.

ಇದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಚುನಾವಣೆ ಬಂದಿದ್ದಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಕೇಂದ್ರ ಮಂತ್ರಿಗಳಿದ್ದಿರಿ ಮಹಾಮಂಡಳಿಯವರನ್ನು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಸಭೆ ಮಾಡಿ ಅಭಿಪ್ರಾಯ ಪಡೆಯಬೇಕು ಅದನ್ನು ಬಿಟ್ಟು ಹೀಗೆ ಹೇಳಿಕೆ ನೀಡಬಾರದೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಟಾಂಗ್ ಕೊಟ್ಟರು.

ಇನ್ನು ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಜೆ ಹಚ್ಚಬೇಕು ಎನ್ನುವುದು ಯುವಕರ ಮನಸ್ಸು ಇದೆ. ಪೊಲೀಸರು ಒಂದು ನಿಯಮ ಹಾಕಿರುತ್ತಾರೆ. ಅದಕ್ಕೆ ಅಡ್ಡಿಯಾಗಬಾರದು, ಅಧಿಕಾರಿಗಳು ಕೂಡ ಯುವಕರಿಗೆ ತಿಳಿ ಹೇಳುವ ಕೆಲಸ ಮಾಡಬೇಕು. ಇದರಿಂದ ಪರಿಸರಕ್ಕೆ ಎಷ್ಟು ತೊಂದರೆ ಆಗುತ್ತದೆ‌. ಇದನ್ನೆಲ್ಲ ಪರಿಗಣಿಸಬೇಕು. ಕೇಂದ್ರ ಮಂತ್ರಿಗಳಿದ್ದಿರಿ ಎಲ್ಲ ಅಧಿಕಾರಿಗಳನ್ನು ಕರೆಯಿಸಿ ಸಭೆ ಮಾಡಿ ತೀರ್ಮಾನ ಮಾಡಬೇಕು ಎಂದರು.

ಹಿಂದೂ-ಮುಸ್ಲೀಂ ಏಕತೆಯೇ ಭಾರತಕ್ಕೆ ಶ್ರೀರಕ್ಷೆ: ಸಂತೋಷ್ ಲಾಡ್

KSRTC: ಮರಕ್ಕೆ ಡಿಕ್ಕಿ ಹೊಡೆದು ಕೆಎಸ್ಆರ್ ಟಿಸಿ ಬಸ್ ಪಲ್ಟಿ:

Yash : ಯಶ್ 19 ಚಿತ್ರದ ಅಪ್ಡೇಟ್ ಗಾಗಿ ಗಣೆಶನ ಮೊರೆ ಹೋದ ಅಭಿಮಾನಿಗಳು..!

- Advertisement -

Latest Posts

Don't Miss