Friday, October 18, 2024

Latest Posts

ದೆಹಲಿಯಲ್ಲಿ ಆಟೋ ಚಾಲಕರು, ಕಾರ್ಮಿಕರಿಗೆ ಬಿಗ್ ಗಿಫ್ಟ್, ಕರ್ನಾಟಕದಲ್ಲಿ ಜಾರಿಗೆ ಎಎಪಿ ಒತ್ತಾಯ

- Advertisement -

ಕರ್ನಾಟಕ ಟಿವಿ ಬೆಂಗಳೂರು :  ಸರಕಾರ ಕೊರೋನ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ವಿಸ್ತರಣೆಗೊಂಡ ಲಾಕ್ ಡೌನ್ ಆರ್ಥಿಕ ಸಂಕಷ್ಟವನ್ನು ಹೊಂದಿದ್ದ ಜನತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಮತ್ತು ಕ್ಯಾಬ್ ಚಾಲಕರು ತಮ್ಮ ಉದ್ಯೋಗವಿಲ್ಲದೆ ಮನೆಯಲ್ಲಿ ಇದ್ದಾರೆ. ಹೋಟೇಲ್ ಉದ್ಯಮ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇರುವುದರಿಂದ ಅನೇಕ ಹೋಟೇಲ್ ಗಳು ಮುಚ್ಚಿ ಹೋಗಿವೆ. ಕಟ್ಟಡ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ ನಿಂತಿವೆ.  ಇದರಿಂದ ಸಂಕಷ್ಟಕ್ಕೆ ಸಿಲುಕಿರುವವರು ಅಲ್ಲಿದ್ದ ಕಾರ್ಮಿಕರು. ಅವರು ಇಂದು ಕೆಲಸ ಇಲ್ಲದೆ ಮನೆಗಳಲ್ಲಿದ್ದಾರೆ. ಮುಂದೆ ಬರಲಿರುವ ಆರ್ಥಿಕ ಸಮಸ್ಯೆಗಳು ಇವರನ್ನು ಇನ್ನಷ್ಟು ಬಾಧಿಸಲಿವೆ.

ಅರವಿಂದ ಕೇಜ್ರೀವಾಲ್ ಅವರ ನೇತೃತ್ವದ ದೆಹಲಿ ಸರಕಾರ ಈಗಾಗಲೇ 35,000 ಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5,000 ರುಪಾಯಿಗಳ ಆರ್ಥಿಕ ನೆರವು ನೀಡಿದೆ. ಆಟೋ, ಟ್ಯಾಕ್ಸಿ ಚಾಲಕರಿಗೆ   5,000 ರುಪಾಯಿಗಳ ಸಹಾಯ ನಿಧಿಯನ್ನು ನೀಡಿದೆ. ಈ ಆರ್ಥಿಕ ನೆರವು ಮಾಚ್ 3, 2020ರ ಒಳಗೆ ಸಾರ್ವಜನಿಕ ಸೇವಾ ಬ್ಯಾಡ್ಜ್ ಪಡೆದವರಿಗೆ ಹಾಗೂ ಫೆಬ್ರವರಿ 1, 2020ರ ನಂತರ ಡ್ರೈವಿಂಗ್ ಲೈಸನ್ಸ್ ಅವಧಿ ಮುಗಿದಿರುವವರಿಗೂ ದೊರೆಯುತ್ತದೆ.  ಅವರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಅವಿರತ ಪರಿಶ್ರಮವನ್ನು ಪಡುತ್ತಿದೆ.  ಈ ನೆರವು ಒದಗಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ. ಅದಕ್ಕಾಗಿ ಆಧಾರ್ ಸಂಖ್ಯೆ ಜೋಡಿಸಿರುವ ಬ್ಯಾಂಕ್ ಖಾತೆಯ ಮಾಹಿಯನ್ನು ನೀಡಬೇಕು. ಇಷ್ಟು ಮಾಹಿತಿಗಳನ್ನು ಫಲಾನುಭವಿಗಳು ಸರಕಾರದ ವೆಬ್ ಸೈಟಿನಲ್ಲಿರುವ ಅರ್ಜಿಯಲ್ಲಿ ತುಂಬ ಬೇಕು. ಹಣವು ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.

ಕರ್ನಾಟಕದಲ್ಲಿ ಹೋಟೆಲ್ ಉದ್ಯಮ ತತ್ತರಿಸಿ ಹೋಗಿದೆ. ಮಹಾನಗರಿಯಾಗಿ ಬೆಳೆದಿರುವ ಬೆಂಗಳೂರಿನಲ್ಲಿ 22, 000 ಕ್ಕೂ ಅಧಿಕ ಹೋಟೇಲ್ ಗಳು ಇವೆ. ಇಲ್ಲಿ 24 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶಗಳಿಂದ ಹಾಗೂ ಕರ್ನಾಟಕದ ಇತರ ಭಾಗಗಳಿಂದ ಬಂದು ಜನರು ಇಲ್ಲಿ ಹೋಟೆಲ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲಕ್ಷೋಪಾದಿ ಜನರಿಗೆ ಉದ್ಯೋಗ ದೊರೆತಿದೆ. ಆದರೆ ಲಾಕ್ ಡೌನ್ ಕಾರಣದಿಂದ ಗ್ರಾಹಕರು ಇಲ್ಲದೆ ಬಹುತೇಕ ಹೋಟೆಲ್ ಗಳು ಮುಚ್ಚಿವೆ. ಹೋಟೇಲ್ ಗಳನ್ನು ನಂಬಿ ಬದುಕುತ್ತಿರುವ ಕಾರ್ಮಿಕರು ಇಂದು ಕಂಗೆಟ್ಟಿದ್ದಾರೆ. ಕೆಲವು ಹೋಟೇಲ್ ಗಳು ಪಾರ್ಸೆಲ್ ವ್ಯವಸ್ಥೆಯನ್ನು ಒಂದು ನಡೆಸುತ್ತಿದ್ದರೂ ಇಲ್ಲಿ ಹೆಚ್ಚಿನ ಕೆಲಸಗಾರರನ್ನು ತೆಗೆದುಕೊಳ್ಳುವಂತಿಲ್ಲ. ಹೀಗಿರುವಾಗ ಹೋಟೇಲ್ ಗಳಲ್ಲಿ ಕೆಲಸ ಮಾಡಿ ಕುಟುಂಬಗಳನ್ನು ನೋಡಿಕೊಳ್ಳುವ ಮಂದಿ ಇಂದು ತೀವ್ರ ತೆರನಾದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಕಾರ ಇವರಿಗೆ ತಕ್ಷಣದ ಆರ್ಥಿಕ ನೆರವನ್ನು ನೀಡಿ ಕೈ ಹಿಡಿಯಬೇಕು. ಇವರಿಗೆ ದೆಹಲಿ ಮಾದರಿಯ ನೆರವನ್ನು ಜಾರಿಗೊಳಿಸಬೇಕು   ಹೋಟೇಲ್, ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಹಾಗೂ ಆಟೋ, ಕ್ಯಾಬ್ ಚಾಲಕರಿಗೆ ಆರ್ಥಿಕ ನೆರವನ್ನು ನೀಡುವ ಕ್ರಮವನ್ನು ರಾಜ್ಯ ಸರಕಾರ ಜಾರಿಗೆ ತರಬೇಕು. ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟೂ ಉಲ್ಬಣಗೊಳ್ಳಲಿದೆ ಎಂದು ಎಎಪಿ ಬೆಂಗಳೂರು ಘಟಕದಅಧ್ಯಕ್ಷ ಮೋಹನ್ ದಾಸರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು.

https://www.youtube.com/watch?v=CsPNpD73qhs
- Advertisement -

Latest Posts

Don't Miss