Delhi: ಕಾರ್ ಖರೀದಿಸುವುದು ಅಂದ್ರೆ ಅದು ಸಾಮಾನ್ಯ ವಿಷಯವಲ್ಲ. ಲಕ್ಷ ಲಕ್ಷ ಬೆಲೆ ಬಾಳುವ ಕಾರ್ ಖರೀದಿಸುವಾಗ, ನಾವು ಅದಕ್ಕಾಗಿಯೇ ಹಣ ಕೂಡಿಟ್‌ಟಿರುತ್ತೇವೆ. ಬಳಿಕ ಲೋನ್ ಮಾಡಿ, ಕಾರ್ ಖರೀದಿಸಿರುತ್ತೇವೆ. ಅದರಲ್ಲಿ ಎಲ್ಲೆಲ್ಲಿ ಹೋಗಬೇಕು ಅನ್ನೋ ಪ್ಲಾನ್ ಎಲ್ಲ ಮಾಡಿರುತ್ತೇವೆ. ಈತ್ತೀಚೆಗಂತೂ ಫೋಟೋಶೂಟ್ ಟ್ರೆಂಡ್ ಬೇರೆ ಶುರುವಾಾಗಿದೆ. ಹಾಗಾಗಿ ಕಾರ್ ಮುಂದೆ ನಿಂತು ಪೋಸ್ ನೀಡಿ, ಫೋಟೋ ಕ್ಲಿಕ್ಕಿಸಿಕ“ಳ್ಳಬೇಕು ಅನ್ನೋ ಹಂಬಲದಲ್ಲಿರುತ್ತೇವೆ.
ಆದರೆ ಇದೆಲ್ಲ ಆಸೆ, ಕನಸು ಇಟ್ಟುಕ“ಂಡಿದ್ದ 1 ಕಪಲ್‌ಗೆ ಆಘಾತ ಎದುರಾಗಿದೆ. ಶೋ ರೂಮ್‌ನಿಂದ ಮನೆಗೆ ಹೋಗುವ ಮುನ್ನವೇ, ಅವರು ಖರೀದಿಸಿದ್ದ ನೂತನ ಮಹಿಂದ್ರಾ ಥಾರ್ ಕಾರ್, ಪುಡಿ ಪುಡಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹಲವರು ಆಕೆಯ ಸ್ಥಿತಿಯನ್ನ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಮಹಿಂದ್ರಾ ಶಿವ ಶೋರೂಮ್‌ನಲ್ಲಿ ಈ ಘಟನೆ ನಡೆದಿದ್ದು, ಗಾಜಿಯಾಪುರದ ನಿವಾಸಿ ಮಣಿ ಪವಾರ್(29) ಎಂಬಾಕೆ ತನ್ನ ಪತಿ ಜತೆ ಬಂದು 27 ಲಕ್ಷ ಮೌಲ್ಯದ ಥಾರ್ ಖರೀದಿಸಿದ್ದರು. ಹಿಂದೂಗಳಲ್ಲಿ ವಾಹನ ಖರೀದಿಸಿದ ಬಳಿಕ, ಪೂಜೆ ಮಾಡಿ, ನಿಂಬೆಹಣ್ಣಿನ ಮೇಲೆ ಆ ವಾಹನ ಚಲಾಯಿಸುವುದು ವಾಡಿಕೆ. ಯಾರ ದೃಷ್ಟಿ ಬೀಳದೇ, ಅಪಘಾತವಾಗದೇ, ಚೆನ್ನಾಗಿರಲಿ ಅನ್ನೋದು ಈ ಪದ್ಧತಿಯ ಹಿಂದಿರುವ ನಂಬಿಕೆ.
ಅದೇ ರೀತಿ ಮಣಿ ಕೂಡ ಥಾರ್ ಶೋರೂಮ್‌ನಲ್ಲೇ ನಿಂಬೆಹಣ್ಣನ್ನು ಇರಿಸಿ, ಅದರ ಮೇಲೆ ಥಾರ್ ಹಾಯಿಸಲು ಮುಂದಾಗಿದ್ದಾರೆ. ದುರಾದೃಷ್ಟವಶಾತ್, ಆಕೆಯ ಡ್ರೈವಿಂಗ್ ಅಂದು ಕೈಕ“ಟ್ಟಿದ್ದು, ಥಾರ್ ಮೇಲಿನ ಮಹಡಿಯಿಂದ ಗ್ಲಾಸ್ ಪುಡಿ ಪುಡಿ ಮಾಡಿ, ಆಚೆ ಬಿದ್ದಿದೆ.
ಮಣಿ ಮತ್ತು ಮಣಿಯ ಪತಿಗೆ ಸಣ್ಣ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿ, ಕಳುಹಿಸಲಾಗಿದೆ. ಥಾರ್ ಬಿದ್ದ ಪರಿಣಾಮ ಅಲ್ಲೇ ಇದ್ದ ಬೈಕ್‌ಗೂ ಹಾನಿಯಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.