- Advertisement -
www.karnatakatv.net- ಅಂತರಾಷ್ಟ್ರೀಯ:-ಲಸಿಕೆ ಹಾಕದ ಜನರಿಗೆ ಡೆಲ್ಟಾ ಪ್ಲಸ್ ರೂಪಾಂತರಿ ಇನ್ನೂ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡೆಲ್ಟಾ ಪ್ಲಸ್ ರೂಪಾಂತರವು ಇಲ್ಲಿಯವರೆಗೆ ಗುರತಿಸಲ್ಪಟ್ಟ ರೂಪಾಂತರಗಳಲ್ಲಿ ಹೆಚ್ಚು ಹರಡಬಲ್ಲದು ಮತ್ತು ಲಸಿಕೆ ಹಾಕಿಸಿಕೊಳ್ಳದ ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಹೆಚ್ಚು ಜನ ಆಸ್ಪತ್ರೆಗೆ ಸೇರ್ತಾರೆ. ಇದರಿಂದಾಗಿ ಸಾವಿನ ಅಪಾಯ ಕೂಡಾ ಹೆಚ್ಚಾಗುತ್ತದೆ ಎಂದಿದ್ದಾರೆ.
- Advertisement -