Tuesday, October 14, 2025

Latest Posts

‘ನಾನೊಬ್ಬನೇ ಶಾಸಕ ಅಲ್ಲ, ಬೇರೆ ಶಾಸಕರಿಗೆ ಧಿಕ್ಕಾರ ಕೂಗಿ’- ಶಾಸಕ ಶಿವರಾಜ್ ಪಾಟೀಲ್ ಕಿಡಿ

- Advertisement -

ರಾಯಚೂರು: ಏಮ್ಸ್ ಹೋರಾಟ ಸಮಿತಿ‌ ಮತ್ತು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ನಡುವೆ ವಾಗ್ವಾದ ನಡೆಯಿತು.  ರಾಯಚೂರಲ್ಲಿ ಏಮ್ಸ್  ಸ್ಥಾಪಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿ ಇಂದು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಕಚೇರಿ ಮುಂದೆ ಪ್ರತಿಭಟನಾ ನಡೆಸಿದರು.

ರಾಯಚೂರು ಜಿಲ್ಲೆಗೆ ನಿರಂತರವಾಗಿ ಅನ್ಯವಾಗ್ತಿದೆ. ಐಐಟಿಯನ್ನೂ ಧಾರವಾಡಕ್ಕೆ ನೀಡಲಾಯಿತು. ಹೀಗಾಗಿ ಪರ್ಯಾಯವಾಗಿ ಏಮ್ಸ್ ನ್ನು  ನೀಡಬೇಕು ಅನ್ನೋದು ಹೋರಾಟ ಸಮಿತಿ ಆಗ್ರಹವಾಗಿದೆ. ಇನ್ನು ಇಂದಿನ ಧರಣಿಯಲ್ಲಿ ಹೋರಾಟ ಸಮಿತಿ ಸದಸ್ಯರು ಶಾಸಕರ ವಿರುದ್ದ ಘೋಷಣೆ ಕೂಗಿದ್ರು. ಈ ವೇಳೆ ಕೆಂಡಾಮಂಡಲರಾದ ಶಾಸಕ ಶಿವರಾಜ ಪಾಟೀಲ್ , ಜಿಲ್ಲೆಯಲ್ಲಿ‌ ನಾನೊಬ್ಬನೇ ಶಾಸಕನಿಲ್ಲ ಇನ್ನೂ ಆರು ಜನ‌ ಶಾಸಕರಿದ್ದಾರೆ ಅವರ ಕಚೇರಿ ಮುಂದೆಯೂ ಧರಣಿ ಮಾಡಿ ಘೋಷಣೆ ಕೂಗಿ ಅಂತ ಏರುದನಿಯಲ್ಲಿ ಪ್ರತಿಕ್ರಿಯಿಸಿದ್ರು. ಇನ್ನು  ನಿಮ್ಮ ಹೋರಾಟಕ್ಕೆ ಬೆಂಬಲಿಸಿ ನಾನು‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಇನ್ನುಳಿದ ಶಾಸಕರ ರಾಜೀನಾಮೆ ಪಡೆಯುವ ಶಕ್ತಿ ನಿಮಗಿದೆಯಾ ಅಂತ ಹೋರಾಟಗಾರರನ್ನ‌ ಶಿವರಾಜ್ ಪಾಟೀಲ್ ತರಾಟೆಗೆ ತೆಗೆದುಕೊಂಡರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss