www.karnatakatv.net : ರಾಯಚೂರು : ಕರೋನ ಮೂರನೇ ಅಲೆ ಭೀತಿಯ ಬೆನ್ನಲ್ಲೇ ಮಕ್ಕಳಿಗೆ ಕೆಮ್ಮು ನೆಗಡಿ ಜ್ವರ ಹಾಗೂ ಡೆಂಗ್ಯೂ ರೋಗ ಕಾಣಿಸಿದ್ದು, ಪಾಲಕರಲ್ಲಿ ಆತಂಕ ಹೆಚ್ಚಾಗಿದೆ.
೧೮ ವರ್ಷದ ಒಳಗಿರುವ ಮಕ್ಕಳಿಗೆ ರಿಮ್ಸ್ ಆಸ್ಪತ್ರೆ ಗೆ ದಾಖಲಾಗಿದ್ದಾರೆ . 2021 ರ ಜನೇವರಿ ಯಿಂದ ಇದುವರೆಗೆ 994 ಮಕ್ಕಳಿಗೆ ಡೆಂಗ್ಯೂ ಪರೀಕ್ಷೆ ಮಾಡಿದು 40 ಮಕ್ಕಳಲ್ಲಿ ಪಾಸಿಟಿವ್ ಆಗಿದೆ. ಇನ್ನೂ ಜಿಲ್ಲೆಯಲ್ಲಿ ಡೆಂಗ್ಯೂಗೆ ೨ ಮಕ್ಕಳು ಬಲಿಯಾಗಿದ್ದು ಪಾಲಕರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ . ಮಕ್ಕಳಿಗೆ ಆರೋಗ್ಯದಲ್ಲಿ ಉಸಿರಾಟದ ತೊಂದರೆ, ಜ್ವರ , ತಲೆನೋವು, ಹಾಗೂ ನೆಗಡಿ ಕಾಣಿಸುತ್ತಿವೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ನಲ್ಲಿ 67 ಬೆಡ್ ಇದ್ದು ಒಂದು ಬೆಡ್ ಗೆ 2 ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ಬೆಡ್ ಫುಲ್ ಆಗಿದ್ದು ವೈದ್ಯರು ಹಗಲು ರಾತ್ರಿ ಅನ್ನದೆ ಚಿಕಿತ್ಸೆ ನೀಡುತ್ತಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು