- Advertisement -
www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿಯ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೊಟೇಲ್ ಬಳಿಯಲ್ಲಿ ಕಾರ್ ವೊಂದು ಹೊತ್ತಿ ಉರಿಯುತ್ತಿದ್ದು, ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆ ಇಲಾಖೆಯ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು..ತಾಂತ್ರಿಕ ತೊಂದರೆಯಿಂದ ರಸ್ತೆ ಮಧ್ಯದಲ್ಲಿಯೇ ಇಂಡಿಕಾ ಕಾರ್ ಗೆ ತಗುಲಿದ ಬೆಂಕಿಯನ್ನು ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ ನಿರ್ದೇಶನದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನೂ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದ ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಜನರ ಆತಂಕ ದೂರ ಮಾಡಿದ್ದಾರೆ.
ಕರ್ನಾಟಕ ಟಿವಿ- ಹುಬ್ಬಳ್ಳಿ
- Advertisement -