ಕಾಡಿನಿಂದ ನಾಡಿಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡುವ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ದಿನರಾತ್ರಿ ಕಾರ್ಯಾಚರಣೆ ನಡೆಸುತ್ತಿದೆ. ಕೇವಲ 26 ದಿನಗಳಲ್ಲಿ 10 ಹುಲಿಗಳನ್ನು, ಅದರಲ್ಲಿ 5 ಚಿಕ್ಕ ಮರಿಗಳನ್ನೂ ಸೇರಿ, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮೈಸೂರು ಜಿಲ್ಲೆಯ ಸರಗೂರು ಮತ್ತು ಗುಂಡ್ಲುಪೇಟೆ ತಾಲೂಕುಗಳ ಕಾಡಂಚಿನ ಗ್ರಾಮಗಳಲ್ಲಿ ನಡೆದ ದಾಳಿಗಳಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬ ರೈತ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಪ್ರತಿಕೂಲತೆ ಮತ್ತು ಟೀಕೆಗಳ ನಡುವೆಯೂ ಅಧಿಕಾರಿಗಳು ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿ, ಬೇಟೆಗಾರರ ಉರುಳಿಗೆ ಬಿದ್ದಿದ್ದ ಒಂದು ವೃದ್ಧ ಹುಲಿಯನ್ನೂ ಹಾಗೂ ಮೂರು ಮರಿಗಳೊಂದಿಗೆ ತಾಯಿ ಹುಲಿಯನ್ನೂ ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆಯ ಈ ವೇಗದ ಕಾರ್ಯಾಚರಣೆ ಅನೇಕ ಜೀವಗಳನ್ನು ಉಳಿಸಿದ್ದು, ಕಾಡು-ನಾಡಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

