Sunday, October 5, 2025

Latest Posts

ಜಾತಿಗಣತಿಯ ಪ್ರಶ್ನೆಗಳು ಟು ಮಚ್‌ ಯಾ..

- Advertisement -

ಬೆಂಗಳೂರಲ್ಲಿ ಇಂದಿನಿಂದ ಜಾತಿ ಗಣತಿಯ ಸಮೀಕ್ಷೆ ಶುರುವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮನೆಗೆ ಗಣತಿದಾರರು ಹೋಗಿ ಸಮೀಕ್ಷೆ ನಡೆಸಿದ್ದಾರೆ. ಪ್ರಾರಂಭದಲ್ಲಿ ತಾಳ್ಮೆಯಿಂದಲೇ ಇದ್ದ ಡಿಕೆಶಿ, ಕೆಲ ಹೊತ್ತಿನ ಬಳಿಕ ಗರಂ ಆಗಿದ್ದಾರೆ. ಬರೋಬ್ಬರಿ 1 ಗಂಟೆಗಳ ಕಾಲ ಸಾಲು, ಸಾಲು ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಸುಸ್ತಾಗಿದ್ದಾರೆ. ಬಳಿಕ ಇದೆಲ್ಲಾ ಬೇಕಾ ಅಂತಾ ಪ್ರಶ್ನಿಸಿದ್ದಾರೆ.

ಸಮೀಕ್ಷೆಯಲ್ಲಿ ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ, ಉದ್ಯೋಗ ಕೃಷಿ ಎಂದು ಬರೆಸಿದ್ದಾರೆ. ಧರ್ಮ: ಹಿಂದೂ, ಜಾತಿ: ಒಕ್ಕಲಿಗ,ಜಾತಿ ಪ್ರಮಾಣ ಪತ್ರವನ್ನು ಶಾಲೆಯಲ್ಲಿ ಪಡೆದಿದ್ದೇನೆ. 31ನೇ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ. ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ‌. ಉದ್ಯೋಗ: ಪಬ್ಲಿಕ್ ಸರ್ವೆಂಟ್, ಸೆಲ್ಪ್ ಎಂಪ್ಲಾಯ್‌ಮೆಂಟ್ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.

ಆದಾಯ ಎಂಬ ಪ್ರಶ್ನೆಗೆ ದೊಡ್ಡ ಸ್ಲಾಬ್ ಹಾಕುವಂತೆ ಗಣತಿದಾರರಿಗೆ ಎಂದು ಡಿಕೆಶಿ ಸೂಚಿಸಿದ್ದಾರೆ. ಬಳಿಕ ಡಿಕೆಶಿ ಪತ್ನಿ ಉಷಾ ಅವರಿಗೂ ಗಣತಿದಾರರು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಮನೆ ಸಂಖ್ಯೆ 128, ಅಂಚೆ ವಿಳಾಸ ದೊಡ್ಡಹಾಲಹಳ್ಳಿ ಎಂದು ಮಾಹಿತಿ ನೀಡಿದ್ದಾರೆ. ಕುಟುಂಬ ಹೊಂದಿರುವ ಆಸ್ತಿ ಬಗ್ಗೆ ಕೇಳ್ತಿದ್ದಂತೆ ಡಿಕೆಶಿ, 50 ಎಕರೆ ಹಾಕಿ ಎಂದಿದ್ದಾರೆ.

ಬ್ಯುಸಿನೆಸ್‌ಗೋಸ್ಕರ ಸಾಲ ಇದೆ. ಬ್ಯಾಂಕ್‌ನಲ್ಲಿ ಸಾಲ ಇದೆ. 25 ಹಸು ಇದೆ, ಎತ್ತು ಇದೆ. ಕುರಿ ಮೇಕೆ ಇದೆ. ಹೈನುಗಾರಿಕೆ , ಕೋಳಿ ಸಾಕಾಣಿಕೆ , ರೇಷ್ಮೆ ಇದೆ. 4 ವಾಣಿಜ್ಯ ಕಟ್ಟಡ, ತೋಟದ ಮನೆ ಇದೆ. ಪಾರ್ಮ್ ಹೌಸ್ 2 ಇದೆ. ಕಂಪ್ಯೂಟರ್, ಫ್ರಿಡ್ಜ್, ಎಸಿ ಎಲ್ಲಾ ಹಾಕಿಕೊಳ್ಳಿ ಎಂದು ಡಿಕೆಶಿ ಹೇಳಿದ್ದಾರೆ.

 

ಇಷ್ಟೆಲ್ಲಾ ಮಾಹಿತಿ ನೀಡುವಷ್ಟರಲ್ಲಿ ಡಿಕೆಶಿ ತಾಳ್ಮೆಯ ಕಟ್ಟೆಯೊಡೆದಿತ್ತು. ಟು ಮಚ್‌ ಎಂದು ಉದ್ಘರಿಸಿದ್ದಾರೆ.
ಫ್ಯಾಕ್ಸ್ ಇದೆಯಾ ಎಂಬ ಪ್ರಶ್ನೆ ಕೇಳ್ತಿದ್ದಂತೆ ಗರಂ ಆಗಿದ್ದಾರೆ. ನಮ್ಮ ಮನೆಯಲ್ಲೇ 1 ಗಂಟೆ ಆಯ್ತು ದಿನಕ್ಕೆ ಎಷ್ಟು ಸಮೀಕ್ಷೆ ಮಾಡ್ತೀರಾ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ.

ಕುರಿ, ಕೋಳಿ, ಟ್ರ್ಯಾಕ್ಟರ್, ಕೇಸ್, ಖಾಯಿಲೆ ಬಗ್ಗೆ ಬೇಕಾ? ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೆ ತಾಳ್ಮೆ ಇಲ್ಲ, ಇನ್ನು ಜನರು ಎಲ್ಲಿಂದ ಮಾಹಿತಿ ಕೊಡ್ತಾರೆ, ನಡೀರಪ್ಪ ಅಂತಾರೆ. ಆರ್ಥಿಕ ಸಾಮಾಜಿಕ ಮಾಹಿತಿ ತಗೊಂಡ್ರೆ ಸಾಕು ಎಂದು ಡಿ.ಕೆ. ಶಿವಕುಮಾರ್​ ಸೂಚಿಸಿದ್ದಾರೆ. ಇದೇ ವೇಳೆ
ಸಮೀಕ್ಷೆ ಪಟ್ಟಿಯಲ್ಲಿರುವ ಪ್ರಶ್ನೆ ಕಡಿಮೆ ಮಾಡಲು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಮಿಷನರ್‌ ತುಳಸಿ ಮದಿನೇನಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss