- Advertisement -
Tumakuru: ತಿಪಟೂರು: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಕೆಎಸ್ಆರ್ಟಿಸಿ ಬಸ್ ಸ್ಟಾಪ್ ಬಾಲಕರ ಹಾಸ್ಟೆಲ್ ಸೇರಿದಂತೆ ಬೆಳ್ಳಂಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ರೈತರ ಪ್ರಯಾಣಿಕರ ಶಾಲಾ ಮಕ್ಕಳ ಸಮಸ್ಯೆ ಆಲಿಸಿದರು.
ತರಕಾರಿ ಮಾರುಕಟ್ಟೆ ಭೇಟಿ ವೇಳೆ ದಲ್ಲಾಳಿಗಳ ಕಮೀಷನ್ ಹಾವಳಿಗೆ ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಮೀಷನ್ ತೆಗೆದುಕೊಳ್ಳುತ್ತಿದ್ದ ದಲ್ಲಾಳಿಗಳ ಕ್ರಮಕ್ಕೆ ಹಾಗೂ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಕ್ಕೆ ಬೇಸರ ವ್ಯಕ್ತಪಡಿಸಿ, ಎಪಿಎಂಸಿಯ ಕಾರ್ಯದರ್ಶಿಯನ್ನು ಕರೆದು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು.
ತಿಪಟೂರು ತಾಲ್ಲೂಕಿನ ಹಲವು ಇಲಾಖೆಗಳನ್ನು ಸ್ಥಳಪರಿಶೀಲನೆ ಮಾಡುವ ಸಾಧ್ಯತೆ ಇದೆ.
- Advertisement -

