ಧಾರವಾಡ: ಗಣೇಶ ಚತುರ್ಥಿ ಬಂತೆಂದರೆ ಸಾಕು. ಅನೇಕ ಯುವಕ ಮಂಡಳದವರು ವಿಭಿನ್ನವಾಗಿ ಎಲ್ಲರ ಗಮನ ಸೆಳೆಯುವಂತೆ ಪೆಂಡಾಲ್ ಹಾಕಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಅದೇ ರೀತಿ ಧಾರವಾಡ ಮದಿಹಾಳದ, ಮದಿಹಾಳ ಹಿತರಕ್ಷಣಾ ಸಮಿತಿ ಸದಸ್ಯರು ವಿಶೇಷ ವಿಭನ್ನತೆ ಎನ್ನುವಂತೆ ಪೆಂಡಾಲ್ ಹಾಕಿ ಗಮನ ಸೆಳೆದಿದ್ದಾರೆ.
ಹೌದು! ಚಂದ್ರಯಾನ-3 ಯಶಸ್ಸು ಭಾರತದ ಹಿರಿಮೆಯನ್ನು ಹೆಚ್ಚಿಸಿದೆ. ಚಂದ್ರನ ಮೇಲೆ ಭಾರತ ತನ್ನ ಹೆಜ್ಜೆ ಗುರುತುಗಳನ್ನು ಇಟ್ಟಿದೆ. ಇಡೀ ಜಗತ್ತು ಭಾರತದತ್ತ ನೋಡುವಂತೆ ಮಾಡಿದ್ದೇ ಚಂದ್ರಯಾನ-3. ಇಸ್ರೋ ಉಡಾವಣೆ ಮಾಡಿದ ಉಪಗ್ರಹದ ಮಾದರಿಯಲ್ಲೇ ಮದಿಹಾಳ ಹಿತರಕ್ಷಣಾ ಸಮಿತಿ ಸದಸ್ಯರು ಮುಖ್ಯ ಪೆಂಡಾಲ್ ಸಿದ್ಧಪಡಿಸಿದ್ದಾರೆ. ಹೊರಗಡೆಯಿಂದ ನೋಡಿದರೆ ಅದು ಥೇಟ್ ಉಪಗ್ರಹದಂತೆಯೇ ಗೋಚರಿಸುತ್ತದೆ. ಎಡ ಹಾಗೂ ಬಲ ಭಾಗದಲ್ಲಿ ಪೆಂಡಾಲ್ ಒಳಗಡೆ ಪ್ರವೇಶಿಸಲು ಬಾಗಿಲುಗಳನ್ನು ಮಾಡಲಾಗಿದೆ. ಉಪಗ್ರಹದ ಅಕ್ಕಪಕ್ಕ ಇಸ್ರೋ ಅಧ್ಯಕ್ಷ ಸೋಮನಾಥ ಮಾಲಿ ಹಾಗೂ ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರ ಭಾವಚಿತ್ರ ಹಾಕಲಾಗಿದೆ
ಒಳಗಡೆ ಪ್ರವೇಶಿಸಿದರೆ ಸೌರಮಂಡಲದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದಂತೆ ಗೋಚರಿಸುತ್ತದೆ. ಚಂದ್ರನ ಮೇಲ್ಭಾಗದ ಚಿತ್ರಣವನ್ನು ಬ್ಯಾನರ್‌ನಲ್ಲಿ ಹೆಣೆಯಲಾಗಿದೆ. ರಾತ್ರಿ ಹೊತ್ತು ನೋಡಿದರೆ ಚಂದ್ರನ ಮೇಲೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆಯೇ ಎಂಬಂತೆ ಕಾಣುತ್ತದೆ. ಇದರ ಜೊತೆಗೆ ವಿಕ್ರಮ್ ಲ್ಯಾಂಡರ್ ನಿರ್ಮಿಸಿದ್ದು ಇದು ಎಲ್ಲರ ಗಮನಸೆಳೆಯುತ್ತದೆ. ಗಣೇಶನ ಪಕ್ಕದಲ್ಲೇ ವಿಕ್ರಮ್ ಲ್ಯಾಂಡರ್ ಇಡಲಾಗಿದ್ದು, ಇದು ನಿಜಕ್ಕೂ ಪ್ರಮುಖ ಆಕರ್ಷಣೀಯವಾಗಿದೆ.
ಒಟ್ಟಾರೆ ಈ ಭಾರಿ ಮದಿಹಾಳ ಹಿತರಕ್ಷಣಾ ಸಮಿತಿಯವರು ವಿಭಿನ್ನತೆಯಲ್ಲಿ ವಿಭಿನ್ನತೆ ಎಂಬಂತೆ ಪೆಂಡಾಲ್ ಹಾಕಿದ್ದು, ಧಾರವಾಡ ನಗರದಲ್ಲೇ ಇದೊಂದು ವಿಶೇಷವೆನಿಸಿದೆ.
Pramod muthalik: ಅಂಜುಮನ್ ಸಂಸ್ಥೆಯವರ ವಿರುದ್ದ ಹರಿಹಾಯ್ದ ಮುತಾಲಿಕ್..!
Hubli:ಎಂಪಿ ಚುನಾವಣೆಗೆ ನಿಲ್ಲಿ ಜನ ನಿಮ್ಮನ್ನ ಲಾಗಾ ಹೊಡೆಸುತ್ತಾರೆ : ಶೆಟ್ಟರ್ ವಿರುದ್ದ ಹರಿಹಾಯ್ದ ಯತ್ನಾಳ್…!