ಧಾರವಾಡ: ಧಾರವಾಡ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಹೈಕೋರ್ಟ್ ಸಮೀಪದಲ್ಲಿ ಸೇತುವೆಯ ಕೆಳಗಡೆ ಸಿಲುಕಿಗೊಂಡಿರುವ ಗ್ಯಾಸ್ ಟ್ಯಾಂಕರ್ ಅನಾಹುತವಾಗದಂತೆ ಪೊಲೀಸರು ತೀವ್ರ ನಿಗಾವನ್ನ ವಹಿಸಿದ್ದು, ಬಹುತೇಕ ಮೂವತ್ತು ಕಿಲೋಮೀಟರ್ ರಸ್ತೆ ಬಂದ್ ಆಗಿದೆ.
ಬೃಹದಾಕಾರದ ಗ್ಯಾಸ್ ಟ್ಯಾಂಕರ್ ಸೇತುವೆ ಕೆಳಗಡೆ ಹಾಯ್ದು ಹೋಗುವಾಗ ಮೇಲೆ ಬಡಿದು ಗ್ಯಾಸ್ ಲೀಕ್ ಆಗಿದೆ. ತಕ್ಷಣವೇ ಅಲ್ಲಿಂದ ಇಳಿದು ಹೋದ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸುಮಾರು ನಾಲ್ಕೂವರೆಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಸುತ್ತಮುತ್ತಲಿನ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಲಾಗಿದೆ. ಬೆಳಗಾವಿ ರಸ್ತೆಯಲ್ಲಿ ಬಾಗೇವಾಡಿ ತನಕ, ಈ ಭಾಗದಲ್ಲಿ ತಡಸ ಕ್ರಾಸ್ ವರೆಗೂ ವಾಹನಗಳು ನಿಂತಿವೆ.
ಹುಬ್ಬಳ್ಳಿ ಧಾರವಾಡ ಬೆಳಗಾವಿಯ ಇತಿಹಾಸದಲ್ಲಿ ಇಂತಹದೊಂದು ಘಟನೆ ನಡೆದಿರಲಿಲ್ಲ. ಟ್ಯಾಂಕರ್‌ನಲ್ಲಿನ ಗ್ಯಾಸ್ ಲೀಕ್ ಆಗುವವರೆಗೂ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಟ್ಯಾಂಕರ್ ನಲ್ಲಿದ್ದ ಗ್ಯಾಸ್ ಸಂಪೂರ್ಣ ಲೀಕ್ ಆದಮೇಲೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.
KRS Dam: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ:ಬಸವರಾಜ ಬೊಮ್ಮಾಯಿ ಆಗ್ರಹ
Garbage : ಸ್ವಚ್ಛ ನಗರ, ಸುಂದರ ನಗರಕ್ಕೆ ಒತ್ತು- ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ