ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ 73 ನೇ ಘಟಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಬಹುಮಾನ ವಿತರಣೆ ಮಾಡಲಾಯಿತು ಕರ್ನಾಟಕ ವಿಶ್ವ ವಿದ್ಯಾಲಯದಿಂದ ಮುರು ಜನರಿಗೆ ಗೌರವ ಡಾಕ್ಟರೇಟ್ ಪ್ರಧಾನ, ಮಾಡುತ್ತಿರುವ ಹಿನ್ನೆಲೆ ಮೂರು ಜನ ಗಣ್ಯರು ಭಾಗಿಯಾಗಿದ್ದರು.
3 ಗಣ್ಯರಿಗೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ ಅವರಿಂದ ಕರ್ನಾಟಕ ವಿವಿಯಲ್ಲಿ ನಡೆದ 73 ನೇ ಘಟಿಕೋತ್ವವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಭಾರತದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಮಗ ಅರವಿಂದ ಜತ್ತಿ ಅವರಿಗೆ ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.ಡಾ.ಅರವಿಂದ ಜತ್ತಿ ಅವರು. ವಚನ ಸಾಹಿತ್ಯದಲ್ಲಿ ಹೆಸರು ಮಾಡಿದ್ದಾರೆ.
ಸಾಮಾಜಿಕ ಕ್ರಾಂತಿ ಮೂಲಕ ಹೆಸರು ಮಾಡಿರುವ ಅರ್ಚನಾ ಸುರಾನಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಕೊಡಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಧಾರವಾಡ ಮೂಲದ ಅನಿವಾಸಿ ಭಾರತೀಯ ರವಿಶಂಕರ್ ಭೋಪಳಾಪೂರ ಅವರು ಶೈಕ್ಷಣಿಕ ಕ್ರಾಂತಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಇವರಿಗೂ ಕೂಡ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ 265 ಪಿಎಚಡಿ ಪದವಿ
3581 ಸ್ನಾತಕೋತ್ತರ ಪದವಿ
22882 ಸ್ನಾತಕ ಪದವಿ
48 ಕಾನೂನು ಪದವಿ
127 ಡಿಪ್ಲೋಮಾ ಪದವಿ
199 ಸರ್ಟಿಫಿಕೇಟ್ ಕೋರ್ಸ್
254 ಬಂಗಾರದ ಪದಕ ಪಡೆಯಲಿರುವ 254 ಜನ ವಿದ್ಯಾರ್ಥಿಗಳು
49 ಜನ ವಿದ್ಯಾರ್ಥಿಗಳಿಗೆ ನಗದು ಪಾರಿತೋಷಕ
62 ಜನ ವಿದ್ಯಾರ್ಥಿಗಳಿಗೆ ಶಿಷ್ಯವೇತನ
73 Rank ಪದವಿ ಪ್ರದಾನ.
ಭರ್ಜರಿ ಬೇಟೆಯಾಡಿದ ಹುಬ್ಬಳ್ಳಿ ಉಪನಗರ ಪೊಲೀಸರು; ಸ್ಕೂಟರ್ ನಿಂದ ಕಾಣೆಯಾಗಿದ್ದ ಹಣ ಪತ್ತೆ..!