ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ಅಚ್ಚರಿಯ ಘಟನೆ ನಡೆದಿದೆ. ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಎನ್ನುವ ಪುಟ್ಟು ಬಾಲಕ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ . ಈತನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಹೃದಯ ಬಡಿತವನ್ನು ನಿಲ್ಲಿಸಿತ್ತು. ಪೋಷಕರು ಮೃತಪಟ್ಟಿದ್ದಾನೆಂದು ಖಚಿತಪಡಿಸಿದ ನಂತರ ಬಾಲಕನ ಅಂತ್ಯ ಸಂಸ್ಕಾರಕ್ಕೆ ಸ್ವಗ್ರಾಮದಲ್ಲೆ ಸಿದ್ದತೆಗಳನ್ನು ನಡೆಸಲಾಗಿತ್ತು.
ಮೃತ ಬಾಲಕನನ್ನು ಸ್ವಗ್ರಾಮವಾದ ಬಸಾಪುರ ಗ್ರಾಮಕ್ಕೆ ಕರೆತಂದು ಸ್ಮಶಾನದಲ್ಲಿ ಬಾಲಕ ಆಕಾಶನ ಅಂತ್ಯ ಸಂಸ್ಕಾರಕ್ಕೆ ವಿಧಿ ವಿಧಾನಗಳನ್ನು ನಡೆದಿದ್ದವು ಇನ್ನೇನು ಬಾಯಲ್ಲಿ ನೀರು ಹಾಕುತ್ತಿದ್ದಂತೆ ಬಾಲಕನು ಪವಾಡವೆಂಬಂತೆ ಉಸಿರಾಡಿದ್ದಾನೆ. ಬಾಲಕ ಇನ್ನು ಜೀವಂತವಾಗಿದ್ದಾನೆ ಎಂದು ತಿಳಿದ ಗ್ರಾಮಸ್ಥರು ಬಾಲಕನನ್ನು ಕೂಡಲೆ ನವಲಗುಂದ ಅಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ನವಲಗುಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಇರುವ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಈ ಪುಟ್ಟ ಬಾಲಕ ಆಕಾಶ ಉಸಿರಾಟ ನಿಲ್ಲಿಸಿ ಕೊನೆಯ ಕ್ಷಣದಲ್ಲಿ ಉಸಿರಾಟ ಶುರುಮಾಡಿ ವೈದ್ಯ ಲೋಕಕ್ಕೆ ಅಚ್ಚರಿಯನ್ನು ಉಂಟು ಮಾಡಿದೆ.
Amith sha ಭಾನುವಾರ ಸಂಸದ ಸರ್ಕಾರದ ‘ರಿಪೋರ್ಟ್ ಕಾರ್ಡ್’ ಬಿಡುಗಡೆ ಮಾಡಲಿರುವ ಅಮಿತ್ ಶಾ
Gas tanker: ಸೇತುವೆ ಕೆಳಗೆ ಸಿಲುಕಿಕೊಂಡ ಟ್ಯಾಂಕರ್: ಟ್ಯಾಂಕರ್ ನಲ್ಲಿ ಗ್ಯಾಸ್ ಖಾಲಿ ಆಗುವವರೆಗೆ ರಸ್ತೆ ತಡೆ..!
Brand Bengalore: ಅಭಿವೃದ್ದಿಯಲ್ಲಿ ಕರ್ನಾಟಕ, ಬೆಂಗಳೂರು ಇಡೀ ದೇಶಕ್ಕೆ ಮಾದರಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್