Tuesday, April 30, 2024

Latest Posts

Mini Vidhanasoudha: ಹಣ ಕೊಟ್ಟರೆ ಮಾತ್ರ ಕೆಲಸ ಮಾಡ್ತಿವಿ: ಇಲ್ಲದಿದ್ದರೆ ನಾಳೆ ಬನ್ನಿ

- Advertisement -

ಧಾರವಾಡ :ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಆದ್ರೆ ಧಾರವಾಡ ಮಿನಿ ವಿಧಾನಸೌಧದಲ್ಲಿ ಮಾತ್ರ ಇದಕ್ಕೆ ವಿರುದ್ಧ. ಇಲ್ಲಿ ಹಣ ನೀಡಿದ್ರೆ ಮಾತ್ರ ಕೆಲಸ ಆಗುತ್ತೆ, ಇಲ್ಲ ಅಂದ್ರೆ ನಾಳೆ ಬನ್ನಿ ಅಂತ ಕಥೆ ಹೇಳಿ ಕಳುಹಿಸುತ್ತಾರೆ.

ಇನ್ನು ಜಾಸ್ತಿ ಮಾತಾಡಿದ್ರೆ ಮುಗೀತು ಏನ ಆದರೂ ಹೇಳಿ ಕಳಿಸಿ ಬಿಡ್ತಾರೆ. ಇತ್ತ ಜಿಲ್ಲಾಡಳಿತ ಸಹ ಯಾವುದಕ್ಕೂ ತಲೆ ಕೆಡಿಸಿಕೊಳ್ತಿಲ್ಲ.

ಈ ಕುರಿತ ವರದಿ ಇಲ್ಲಿದೆ ನೋಡಿ. ಹೌದು! ಅದ್ಯಾಕೋ ಏನೋ ಧಾರವಾಡ ಮಿನಿ ವಿಧಾನಸೌಧದಲ್ಲಿ ತಾಲೂಕು ಕಚೇರಿ ಅಂದ್ರೆ ಸಾಕು ಸಾರ್ವಜನಿಕರು ಹಾಗೂ ರೈತರು ಹಿಡಿ ಶಾಪ ಹಾಕ್ತಿದಾರೆ. ಇಲ್ಲಿಗೆ ಒಂದೇ ಸಲಕ್ಕೆ ಇದುವರೆಗೂ ಕೆಲಸ ಆಗಿರುವ ಉದಾಹರಣೆ ಇಲ್ವೇ ಇಲ್ಲ ಅಂತ ಜನಸಾಮಾನ್ಯರ ಮಾತನಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ ಧಾರವಾಡ ಮಿನಿ ವಿಧಾನಸೌಧದಲ್ಲಿರುವ ಕಚೇರಿ.

ಪ್ರತಿ ಕೆಲಸಕ್ಕೂ ಇಲ್ಲಿ ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಂದು ವೇಳೆ ಲಂಚ ನೀಡಿಲ್ಲ ಅಂದ್ರೆ ಪ್ರತಿ ದಿನ ಅಲೆಸಿ ಅಲೆಸಿ ಸಾಕು ಸಾಕಾಗಿ ಮಾಡಿಬಿಡ್ತಾರೆ ಇಲ್ಲಿನ ಅಧಿಕಾರಿಗಳು. ಇನ್ನು ಇಲ್ಲಿ ಬಹುತೇಕ ರೈತರೇ ಆಗಮಿಸುತ್ತಿದ್ದು, ಹೆಚ್ಚಿಗೆ ಏನಾದ್ರು ಮಾತನಾಡಿದ್ರೆ ನೀವು ಕೇಳಿರುವ ದಾಖಲಾತಿ ಇಲ್ಲ ಅನ್ನೋ ರೆಡಿಮೇಡ್ ಉತ್ತರ ನೀಡಿ ಅಲೆದಾಡಿಸುತ್ತಾರೆ.

ಇವೆಲ್ಲ ಕಣ್ಣಾರೆ ಕಂಡರು ಸಹ ಮೇಲಾಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳೋದಿಲ್ಲ.

ನೋಡಿ ಸ್ವಾಮಿ ಈ ರೀತಿ ಯಾಕ್ ಹೇಳ್ತಾ ಇದ್ದೀವಿ ಅನ್ಕೊಂಡ್ರಾ. ಹೌದು ನಾವು ನಿಮಗೆ ಈ ರೀತಿ ಹೇಳಲಿಕ್ಕೆ ಕಾರಣ ಇದೆ ಯಾಕ್ ಅಂತೀರಾ ರಾಯನಾಳ ಗ್ರಾಮದ ರೈತ ಬಸಯ್ಯ ತೀರ್ಥ ಮಠ ಅವರು ತಮ್ಮ ಹೊಲದ ನಕಾಶೆ ಸಲುವಾಗಿ ಧಾರವಾಡದ ಮಿನಿ ವಿಧಾನಸೌದದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಕಚೇರಿಗೆ ಒಂದ ತಿಂಗಳಿನಿಂದ ಅಲೆದಾಡಿಸಿ ಕೊನೆಗೆ 1500 ರೂ ಕೊಟ್ಟು ತಮ್ಮ ಹೊಲದ ನಕಾಶೆ ತೆಗೆದುಕೊಂಡು ಹೋಗಿದ್ದಾರೆ.

ಒಟ್ಟಾರೆ ಧಾರವಾಡ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಇದೆ ಆಗಿದ್ದು, ಬೇಕಂತಲೆ ಸತಾಯಿಸುವುದು, ನಾಳೆ ಬಾ ಎನ್ನುವುದು, ಅದು ಸರಿಯಿಲ್ಲ ಇದು ಬೇಕು ಎಂದು ಕುಂಟು ನೆಪಗಳನ್ನ ಹೇಳಿ ರೈತರನ್ನ ಕಚೇರಿಗಳ ಸುತ್ತಾಡಿಸೋದನ್ನ, ರೂಢಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದ್ರು ಸಹ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಮಂತ್ರಿಗಳು ಮಾತ್ರ ಕೈಕಟ್ಟಿ ಕುಳಿತಿರುವುದು ಮಾತ್ರ ದುರಂತವೇ ಸರಿ.

Traffic Rules Break: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ ಪೊಲೀಸ್:

AAP ಕಾಂಗ್ರೆಸ್ಸಿಗರಿಗೆ ಬ್ರಿಜೇಶ್ ಕಾಳಪ್ಪ ಪ್ರಶ್ನೆ

Shetter Phone call : ರಾಜಕೀಯ ಗಮನವನ್ನು ಬೇರೆಡೆಗೆ ಸೆಳೆಯಲು ತಂತ್ರ

- Advertisement -

Latest Posts

Don't Miss