Thursday, May 16, 2024

Latest Posts

ಕಾಂಗರೂ ಟ್ರೀಟ್ಮೆಂಟ್ ಅಂದ್ರೇನು..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಕಾಂಗರೂ ಟ್ರೀಟ್‌ಮೆಂಟ್ ಎಂಬ ಚಿಕಿತ್ಸೆ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹೆಸರಿಗೆ ತಕ್ಕಂತೆ, ಇಂದು ಅಮ್ಮ ಮತ್ತು ಮಗುವಿಗೆ ಇರುವ ಚಿಕಿತ್ಸೆಯಾಗಿದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ಕೇಳಿ.

ಕಾಂಗರೂ ಹೇಗೆ ತನ್ನ ಚರ್ಮದ ಭಾಗದಲ್ಲಿ ತಮ್ಮ ಮಗುವನ್ನು ಇಟ್ಟುಕೊಂಡು ಓಡಾಡುತ್ತದೆಯೋ, ಅದೇ ರೀತಿ, ಅಮ್ಮನ ಮಡಿಲಲ್ಲಿ ಮಗುವನ್ನು ಬೆಚ್ಚಗಿರಿಸುವುದನ್ನು ಕಾಂಗರೂ ಕೇರ್ ಎಂದು ಹೇಳಲಾಗುತ್ತದೆ. ಹಾಗಾಗಿ ಮಗು ಹುಟ್ಟಿದಾಕ್ಷಣ ಮಗುವನ್ನು ತಾಯಿಯ ಎದೆಯ ಮೇಲೆ ಮಲಗಿಸಲಾಗುತ್ತದೆ. ಬಳಿಕ ತಾಯಿಯೊಂದಿಗೆ ಇರಿಸಲಾಗುತ್ತದೆ.

ಅಲ್ಲದೇ, ಮಗುವಿಗೆ ಎದೆಹಾಲನ್ನು ಉಣಿಸಬೇಕಾಗುತ್ತದೆ. ತಾಯಿಯ ಹಾಲಿಗಿಂತ ಶ್ರೇಷ್ಠವಾದ ಅಮೃತ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ವೈದ್ಯರು 6 ತಿಂಗಳ ಕಾಲ ತಾಯಿಯ ಎದೆಹಾಲನ್ನು ಬಿಟ್ಟು ಮತ್ತೇನನ್ನೂ ರೆಫರ್ ಮಾಡುವುದಿಲ್ಲ. 6 ತಿಂಗಳ ನಂತರವೂ ಬೇರೆ ಆಹಾರದೊಂದಿಗೆ ಮಗು ಎದೆ ಹಾಲನ್ನು ಸೇವಿಸಬೇಕು ಅಂತಾ ಹೇಳಲಾಗುತ್ತದೆ. ಹೀಗೆ ಮಗುವಿಗೆ ತಾಯಿಯಿಂದ ಸಿಗುವ ಬೆಚ್ಚನೆ ಅನುಭವವನ್ನೇ ಕಾಂಗರೂ ಟ್‌ರೀಟ್‌ಮೆಂಟ್ ಎಂದು ಹೇಳಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss