Wednesday, April 16, 2025

Latest Posts

Police: ಕಳ್ಳತನ ಮಾಡಿ ಮನೆಯಿಂದ ಬಾಹರ್; ಠಾಣೆಯಲ್ಲಿ ಅಂದರ್..!

- Advertisement -

ಧಾರವಾಡ: ಮನೆಯಲ್ಲಿ ಮಾಲೀಕರಿಲ್ಲದ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು, ಬಹಳ ದಿನಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಖದೀಮರನ್ನು    ಬಂಧಿಸುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ದೇಶಪಾಂಡೆ ಆಸ್ಪತ್ರೆ ಬಳಿಯ ನಿವಾಸಿ 29 ವಯಸ್ಸಿನ‌ ಮಲ್ಲಯ್ಯ ಅಲಿಯಾಸ್ ಬೇವಿನತಪ್ಪಲ ಬಸಯ್ಯ ಮಠಪತಿಎನ್ನುವ ಖದೀಮನನ್ನು ಬಂಧಿಸಿ ಅವನಿಂದ 5,56,600 ರೂ ಮೌಲ್ಯದ 123.8 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಮೂರು ಕಳ್ಳತನ ಪ್ರಕರಣಗಳು ಹೊರಬಿದ್ದಿವೆ.

ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ತಳವಾರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಂಕರಗೌಡ ಬಸನಗೌಡರ ನೇತೃತ್ವದಲ್ಲಿ ಆರೋಪಿತರ ಪತ್ತೆ ಕುರಿತು ವಿಶೇಷ ತಂಡ ರಚಿಸಲಾಗಿತ್ತು. ಉಮೇಶಗೌಡ ಎಂ. ಪಾಟೀಲ ಪಿಎಸ್‍ಐ (ಅಪರಾಧ ವಿಭಾಗ), ಸಚೀನ್ ಕುಮಾರ ದಾಸರೆಡ್ಡಿ ಪಿಎಸ್‍ಐ (ಕಾ ವ ಸು), ಎಲ್. ಕೆ ಕೊಡಬಾಳ ಮ.ಪಿ.ಎಸ್.ಐ, ವಾಯ್. ಡಿ ಮೇದಾರ .ಪಿ.ಎಸ್.ಐ (ಹೆಚ್ಚುವರಿ) ಹಾಗೂ ಕೆ.ಎನ್ ನೆಲಗುಡ್ಡ ಎಎಸ್‍ಐ, ಹೆಚ್.ಸಿ-1577 ಎಸ್.ವಿ ನೀಲಣ್ಣವರ, ಹೆಚ್.ಸಿ-1663 ಸಿ.ಟಿ ನಡುವಿನಮನಿ, ಸಿ.ಪಿ.ಸಿ-2322 ಬಿ. ವಿ ಸಣ್ಣಪ್ಪನವರ, ಸಿ.ಪಿ.ಸಿ-2923 ಶ್ರೀಕಾಂತ ತಲ್ಲೂರ, ಸಿ.ಪಿ.ಸಿ-2937 ಶ್ರೀ ಹೆಚ್. ಬಿ ವಡ್ಡರ ರವರು ಹಾಗೂ ತನಿಖಾ ಸಹಾಯಕರಾದ ಸಿ.ಪಿ.ಸಿ-2468 ಶ್ರೀ ಹೆಚ್.ವೈ ಜೆಟ್ಟೆಣ್ಣವರ, ಸಿ.ಪಿ.ಸಿ2685 ಮಂಜುನಾಥ ಎಸ್ ಗೊರಾಬಾಳ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಪಿಹೆಚ್ ಡಿ ಮಾಡಿ ಸನಾತನ ಧರ್ಮ ಇಲ್ಲಾ ಅಂತಾ ಪ್ರೂ ಮಾಡ್ಲಿ’- ಟೆಂಗಿನಕಾಯಿ

ರೈಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷ ಲಕ್ಷ ಪಂಗನಾಮ ಹಾಕಿ; ಜೈಲು ಸೇರಿದ ಪ್ರಶಾಂತ ದೇಶಪಾಂಡೆ

ಹುಣಸೂರಿನಲ್ಲಿ ಕರ್ತವ್ಯನಿರತ ಹೋಂಗಾರ್ಡ್ ಮೇಲೆ ಹಲ್ಲೆ, ಆರೋಪಿ ಬಂಧನ

- Advertisement -

Latest Posts

Don't Miss