- Advertisement -
Hubli News: ಹುಬ್ಬಳ್ಳಿ: ಹಿಂದೂ ನಂಬಿಕೆಗಳ ಬೇರುಗಳನ್ನು ಸಡಿಲು ಮಾಡಲು ಮೂಲಭೂತವಾದ ಕೆಲಸ ಮಾಡುತ್ತಿದೆ. ಈಡೀ ಜಗತ್ತು ಹಿಂದುತ್ವ ಆಗುತ್ತಿದೆ. ನಮ್ಮಲ್ಲಿರುವ ಪ್ರತಿಯೊಂದು ದೇವಸ್ಥಾನಕ್ಕೆ ಒಂದೊಂದು ಇತಿಹಾಸ ಇದೆ. ಆದರೇ ಮೊಸರನಲ್ಲಿ ಕಲ್ಲು ಹುಡುಕುವ ಕೆಲಸ ಅಗುತ್ತಿದೆ ಎಂದು ಧರ್ಮಸ್ಥಳದ ಪ್ರಕರಣದ ಕುರಿತು ವಚನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಸುದ್ಧಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಧರ್ಮಸ್ಥಳ ಅದ್ಭುತವಾದ ಕೆಲಸ ಮಾಡುತ್ತಿದೆ. ವೀರೇಂದ್ರ ಹೆಗ್ಗಡೆವರ ಹೆಸರಿಗೆ ಕಪ್ಪು ಚುಕ್ಕೆ ತರಲು ಕೆಲವರು ಹೊರಟಿದ್ದಾರೆ. ಧರ್ಮಸ್ಥಳ ಮತ್ತು ಹೆಗ್ಗಡೆ ಅವರ ಜೊತೆಗೆ ನಾವು ಇರುತ್ತೇವೆ, ಎಲ್ಲಾ ಹಿಂದುಗಳು ಇರಬೇಕು ಎಂದರು.
ಧರ್ಮಸ್ಥಳವನ್ನ ಮೂಲಭೂತವಾದಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದೂಗಳಿಗೆ ಸಮಸ್ಯೆ ಬರುತ್ತಿರುವುದು ಹಿಂದುಗಳಿಂದ. ಹಿಂದುಗಳಿಗೆ ಹಿಂದುಗಳೇ ಕಂಟಕ ಎಂದು ಅವರು ಹೇಳಿದರು.
- Advertisement -