banglore: FILM STORIES
ಚಾಲೆಂಜಿಂಗ್ ಸ್ಟಾರ್ ದರ್ಶನ್[DHARSHAN] ಸಿನಿಮಾರಂಗಕ್ಕೆ ಬಂದು 24 ವರ್ಷಗಳು ಪೂರೈಸಿವೆ. ಸಾಮಾನ್ಯ ಲೈಟ್ ಬಾಯ್ ಆಗಿ ಸಿನಿರಂಗ ಪ್ರವೇಶಿಸಿದ ದಚ್ಚು ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಭಿಮಾನಿಗಳ ಪಾಲಿನ ನೆಚ್ಚಿನ ನಟನಾಗಿ ನಾಡಿನಾದ್ಯಂತ ಪರಿಚಿತವಾಗಿರಾಗಿದ್ದಾರೆ. ಡಿ ಬಾಸ್ ಶ್ರಮವೇ ಅವರ ಪ್ರಖ್ಯಾತಿಯ ಕೈಗನ್ನಡಿ.
ಡಿ ಬಾಸ್ ಖ್ಯಾತ ಕಲಾವಿದನ ಮಗನಾಗಿದ್ದರೂ ಸಿನಿಲೋಕ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿಲ್ಲ. ಸುಲ್ತಾನನ ಸಿನಿ ಸಂಚಾರ ಸರಾಗವಾದ ಹಾದಿಯಾಗಿರಲಿಲ್ಲ.ನಿಜ ದರ್ಶನ್ ಖ್ಯಾತ ಖಳನಾಯಕ ಪಾತ್ರದಾರಿ ಶ್ರೀನಿವಾಸ್ ತೂಗುದೀಪ್ ರವರ ಮಗನಾಗಿದ್ರು ತನ್ನ ವೃತ್ತಿ ಜೀವನ ಆರಂಭಿಸಿದ್ದು ಲೈಟ್ ಬಾಯ್ ಆಗಿ.ತದನಂತರದ ಮೆಟ್ಟಿಲುಗಳೆ ದಚ್ಚು ಡಿ ಬಾಸ್ ಎನ್ನುವಷ್ಟರ ಮಟ್ಟಿಗೆ ಬೆಳೆಸಿದವು.
ಬೆಳ್ಳಿತೆರೆಯಲ್ಲಿ ಬೆರಗು ಮೂಡಿಸೋ ದರ್ಶನ್ ಪಾತ್ರ ಕಂಡು ದೊಡ್ಡ ಪರದೆಯ ಪಮಯಣಕ್ಕೆ ಅವಕಾಶ ಕೊಟ್ಟವರೇ ಎಸ್ ನಾರಾಯಣ್. ಹೌದು ದರ್ಶನ್ ಮೊದಲು ಕಾಣಿಸಿಕೊಂಡ ಚಿತ್ರವೇ ಮಹಾಭಾರತ. ಈ ಚಿತ್ರದಲ್ಲಿ ದಚ್ಚು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಇನ್ನಿತರ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಪರದೆಯಲ್ಲಿ ಪಯಣಿಸತೊಡಗಿದರು.
ದರ್ಶನ್ ಲೈಫ್ ಸ್ಟೈಲ್ ಬದಲಿಸಿದ ಮೆಜೆಸ್ಟಿಕ್ :
2002 ರಲ್ಲಿ ದರ್ಶನ್ ಲಾಂಗ್ ಹಿಡಿದು ಸ್ಯಾಂಡಲ್ ವುಡ್ ಸಿನಿ ಸ್ಟೈಲನ್ನೇ ಬದಲಾಯಿಸಿ ಬಿಟ್ಟರು. ಪಕ್ಕಾ ಡಾನ್ ಪಾತ್ರದಲ್ಲಿ ಮಗ್ನರಾಗಿ ಪಾತ್ರಕ್ಕೆ ನಾಯಕನಾಗಿ ಜೀವ ತುಂಬಿದ್ದ ದಚ್ಚು ಅಭಿಮಾನಿಗಳ ಪಾಲಿಗೆ ಡಿ ಬಾಸ್ ಆದ್ರು, ತದನಂತರ ದರ್ಶನ್ ಮುಟ್ಟಿದ್ದೆಲ್ಲಾ ಚಿನ್ನ. ನಂತರದ ಸಕ್ಸಸ್ ಪ್ರೇಮ್ ನಿರ್ದೇಶನದ ಕರಿಯಾ ಸಿನಿಮಾಕ್ಕೆ ಅಲ್ಲಿಂದ ಬಾಕ್ಸ್ ಆಫೀಸ್ ಸುಲ್ತಾನ ಹಿಂತಿರುಗಿ ನೋಡಿದ್ದೇ ಇಲ್ಲ.
ಸ್ನೇಹಿತರ ಜೊತೆ ದರ್ಶನ್ ಸಿನಿ ಸಂಭ್ರಮಾಚರಣೆ:
ದರ್ಶನ್ ತನ್ನ ಸಿನಿ ಜೀವನದಲ್ಲಿ ಏಳು ಬೀಳಿನ ನಡುವೆ 24 ವರ್ಷಗಳನ್ನು ಪೂರೈಸಿದ್ದಾರೆ.ಈ ಸಿಹಿ ಸಂಭ್ರಮವನ್ನು ದಚ್ಚು ಸಂಭ್ರಮಿಸಿದ್ದು ಸ್ನೇಹಿತರ ಜೊತೆಗೆ. ಸ್ನೇಹಿತರು ದರ್ಶನ್ ಮನೆಗೆ ತೆರಳಿ ಸನ್ಮಾನ ಮಾಡಿ ಪ್ರೀತಿಯ ಅಪ್ಪುಗೆ ಜೊತೆ ಸಿಹಿ ತಿನ್ನಿಸಿ ಖುಷಿಪಟ್ರು. ಕೇಕ್ ಕತ್ತರಿಸಿ ಸಂತಸ ವ್ಯಕ್ತ ಪಡಿಸಿದ್ರು ಡಿ ಬಾಸ್. ರಾಕ್ ಲೈನ್ ವೆಂಕಟೇಶ್ ಸೇರಿದಂತೆ ದರ್ಶನ್ ಆಪ್ತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ರು. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿವೆ.
‘ವಾಮನ’ಗೆ ಜೋಡಿಯಾದ ರೀಷ್ಮಾ ನಾಣಯ್ಯ…ಶೋಕ್ದಾರ್ ಧ್ವನೀರ್ ಗೌಡಗೆ ಕೊಡಗಿನ ಬೆಡಗಿ ನಾಯಕಿ


