Tuesday, April 15, 2025

Latest Posts

ಡಿ ಬಾಸ್ ಫಾರ್ಮ್ ಹೌಸ್ ಗೆ ಅರಣ್ಯಾಧಿಕಾರಿಗಳ ರೈಡ್..!

- Advertisement -

Film News:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವನ್ನು ನೀಡಿದ್ದರು. ಈ ವೇಳೆ ತಮ್ಮ ತೋಟದಲ್ಲಿ ಸಾಕಿರುವ ವಿಶಿಷ್ಟ ಪ್ರಭೇದದ ಪಕ್ಷಿಗಳ ಪರಿಚಯವನ್ನು ಮಾಡಿಕೊಟ್ಟಿದ್ದರು. ಆ ಬಳಿಕ ಅರಣ್ಯಾಧಿಕಾರಿಗಳು ರೇಡ್ ಮಾಡಿದ್ದಾರೆ. ದರ್ಶನ್ ಫಾರ್ಮ್‌ಹೌಸ್‌ನಲ್ಲಿ ವಿದೇಶಿ ಪಕ್ಷಿಗಳನ್ನು ಸಾಕುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ವನ್ಯಜೀವಿ ಕಾಯ್ದೆಯಡಿ ಅನುಮತಿ ಹಾಗೂ ಮಾಲೀಕತ್ವದ ಪತ್ರವನ್ನು ಹಾಜರು ಪಡಿಸಲು ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಫಾರ್ಮ್ ಹೌಸ್‌ನಲ್ಲಿ ಕೋಳಿ ಜಾತಿಗೆ ಸೇರಿದ ಮೆಕಾಸೆ,ಗಿಳಿ ಪ್ರಭೇದ ಸನ್‌ಕಾಯ್ನ್,ಪುಕಾಟೋ, ಕಪ್ಪು ಹಂಸ ಸೇರಿದಂತೆ ಹಲವು ಪಕ್ಷಿಗಳಿವೆ ಇವುಗಳನ್ನು ಸಾಕಲು ಅವಕಾಶವಿದೆ. ಆದರೆ, ಅದಕ್ಕೆ ಮಾಲೀಕತ್ವ ಪತ್ರದ ಸೇರಿದಂತೆ ಹಲವು ದಾಖಲಾತಿಗಳು ಬೇಕಿವೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಮುಂದಿನ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ತದ ನಂತರ ಇವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕಾತುರತೆ ಇದೆ.

ಅಭಿಮಾನಿಯಿಂದ ಯಶ್ ಗೆ ಪತ್ರ..!

‘ಕ್ರಾಂತಿ’ಗೆ ಅಭಿಮಾನಿಗಳ ಕಟೌಟ್…!

ಬಟ್ಟೆ ಸುದ್ದಿಗೆ ಟ್ರೋಲ್ ಆದ ಪಠಾಣ್ ವಿಲ್ಲನ್..!

- Advertisement -

Latest Posts

Don't Miss