Film News : ದಚ್ಚು ಹಾಗು ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಇದೀಗ ಮತ್ತೆ ಅವರ ಸ್ನೇಹದ ವಿಚಾರ ಪ್ರಸ್ತಾಪವಾಗಿದೆ. ಇವರ ಜೊತೆ ಒಬ್ಬ ಕ್ರಿಕೆಟಿಗ ಕೂಡಾ ಇದ್ನಂತೆ ಹಾಗಿದ್ರೆ ಮತ್ಯಾಕೆ ಈ ವಿಚಾರ ಬಂತು ಏನಿದರ ಸ್ಟೋರಿ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್……
ದಚ್ಚು ಒಂದು ಸಮಯದಲ್ಲಿ ಸ್ನೇಹಿತರನ್ನು ಗುಡ್ಡೆ ಹಾಕಿಕೊಂಡು ಟ್ರಿಪ್‌ಗೆ ಹೋಗಿದ್ದರು. ಬೈಕ್ ರೈಡ್ ಅಂತ ಕಾಡು ಮೇಡು ಸುತ್ತಿದ್ರು. ಹಳ್ಳಿ, ಕಾಡು ಮೇಡು ಅಲೆದಾಡಿದ್ದರು. ಆ ವೇಳೆ ದರ್ಶನ್ ಹಾಗೂ ಸುದೀಪ್ ಇಬ್ಬರ ಪರಸ್ಪರ ಒಬ್ಬರನ್ನೊಬ್ಬರು ಕಾಲೆಳೆದುಕೊಂಡಿದ್ದು ಇದೆಯಂತೆ. ಈ ವಿಡಿಯೊಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಆದರೆ ಇದೀಗ ಸ್ನೇಹಿತರಿಬ್ಬರು ಯಾವುದೋ ಕಾರಣಕ್ಕೆ ಮುನಿಸಿಕೊಂಡು ಬೇರೆಯಾಗಿದ್ದಾರೆ. ಆದರೂ, ಅವರ ಅಭಿಮಾನಿಗಳು ಇವತ್ತಲ್ಲ ನಾಳೆ ಒಂದಾಗುತ್ತಾರೆ ಅನ್ನೋ ನಿರೀಕ್ಷೆಯಲ್ಲೇ ಇದ್ದಾರೆ ಫ್ಯಾನ್ಸ್ . ಸದ್ಯ ದರ್ಶನ್ ಹಾಗೂ ಸುದೀಪ್ ಇಬ್ಬರೂ ಬೈಕ್ ರೈಡ್ ಹೋಗಿದ್ದ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆ ಈಗ ವೈರಲ್ ಆಗುತ್ತಿದೆ.
ಮತ್ತೆ ಕಿಚ್ಚ-ದಚ್ಚು ಹಳೇ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗರೊಬ್ಬರ ಕಾಲೆಳೆದಿದ್ದಾರೆ. ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಟ್ರಿಪ್ ಹೋದಾಗ ಸಿಸಿಎಲ್‌ನಲ್ಲಿ ಕ್ರೇಜ್ ಇತ್ತು. ಸ್ವತ: ದರ್ಶನ್ ಕೂಡ ಸಿಸಿಎಲ್‌ನ ಭಾಗವಾಗಿದ್ದರು. ಆ ವೇಳೆ ಕರ್ನಾಟಕದ ಮಾಜಿ ಕ್ರಿಕೆಟಿಗ ಕೆ ಅನಿಲ್ ಕುಮಾರ್ ಕೂಡ ಈ ಟ್ರಿಪ್‌ನ ಒಂದು ಭಾಗವಾಗಿದ್ದರು.
ಈ ವೇಳೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರು ಮಾತಾಡುವಾಗ ಅಲ್ಲೇ ಪಕ್ಕದಲ್ಲಿದ್ದ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಕೋಚ್ ಆಗಿದ್ದ ಜಿ ಕೆ ಅನಿಲ್ ಕುಮಾರ್ ಅವರನ್ನು ತಮಾಷೆಯಾಗಿ ಕಾಲೆಳೆದಿರುವ ವೀಡಿಯೋ ಈಗ ವೈರಲ್ ಆಗಿದೆ.
ಇದೇ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಒಟ್ಟಾರೆ ಅಭಿಮಾನಿಗಳು ಇಬ್ಬರೂ ಮತ್ತೆ ಒಂದಾಗಲಿ ಎಂದು ಬಯಸುತ್ತಿದ್ದಾರೆ.
Amrtha Ayyangar : ಮದುವೆಯಾಗ್ತಾರಾ ಡಾಲಿ-ಅಮೃತಾ..?! ನಟಿ ಸ್ಪಷ್ಟನೆ ಏನು ..!
Rashmika mandanna-ವಿಜಯ್ ದೇವರಕೊಂಡ ಹಾಕಿರುವ ಅಂಗಿ ತರಾ ಇದೆ ಅಲ್ವಾ ..?