Dharwad: ತೀರ್ಪು ಪ್ರಕಟಿಸೋ ಹೊತ್ತಲ್ಲೇ ಯೋಗೇಶ್ ಗೌಡ ಕುಟುಂಬಸ್ಥರ ಹೊಡೆದಾಟ!

Dharwad News: ಧಾರವಾಡ: ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಕಳೆದ ಎಂಟು ವರ್ಷಗಳಿಂದ ಸಿಲುಕಿ ಒದ್ದಾಡುತ್ತಿದ್ದಾರೆ. ಇದೇ ಏಪ್ರಿಲ್​ 15ರಂದು ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಲಿದೆ. ಆದರೆ, ಯೋಗೇಶ್​ ಗೌಡ ಕೊಲೆ ಪ್ರಕರಣದ ತೀರ್ಪು ಪ್ರಕಟದ ಹೊತ್ತಲ್ಲೇ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದಾರೆ. ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿದ್ದು, ಯೋಗೇಶ್​ ಗೌಡ ಸಹೋದರ ಹಾಗೂ ಸಹೋದರಿಯರ ಹೊಡೆದಾಡಿಕೊಂಡಿದ್ದಾರೆ.

ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ಕಲಹ

ಇದೇ ಏಪ್ರಿಲ್​ 15 ರಂದು ಯೋಗೇಶ್​ ಗೌಡ ಕೊಲೆ ಪ್ರಕರಣದ ತೀರ್ಪು ಪ್ರಕಟವಾಗಲಿದೆ. ಕೊಲೆ ಪ್ರಕರಣದ ಟ್ರಯಲ್ ನಡೆಸಿ ತೀರ್ಪು ಕಾಯ್ದಿರಿಸಿರುವ ಕೋರ್ಟ್ ಏಪ್ರಿಲ್​ 15ಕ್ಕೆ ತೀರ್ಪು ಪ್ರಕಟಿಸಲಿದೆ. ಈ ಹೊತ್ತಲ್ಲೇ ಮೃತ ಯೋಗೇಶ್​ ಗೌಡ ಸಹೋದರ ಹಾಗೂ ಸಹೋದರಿಯರ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲದೆ ಸಹೋದರ ಹಾಗೂ ಸಹೋದರಿಯರ ನಡುವಿನ ಸಂಭಾಷಣೆ ಆಡಿಯೋ ಮತ್ತು ಹೊಡೆದಾಡಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ.

ರಾಡ್, ವೈಯರ್ ನಿಂದ ಸಹೋದರಿಯರಿಗೆ ಥಳಿಸಿದ ಗುರುನಾಥ್​ ಗೌಡ
ಧಾರವಾಡ ತಾಲೂಕಿನ ‌ಗೋವಿನಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಈ ಗಲಾಟೆ ನಡೆದಿದೆ. ಮೃತ ಯೋಗೇಶ್​ ಗೌಡ ಸಹೋದರ ಗುರುನಾಥ್​ ಗೌಡ, ಸಹೋದರಿಯರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಬ್ಬಿಣದ ರಾಡ್ ಮತ್ತು ವೈಯರ್​ನಿಂದ ಸಹೋದರಿಯಾದ ಜಗದೀಶ್ವರಿ ಮತ್ತು ಅಕ್ಕಮಹಾದೇವಿಗೆ ಗುರುನಾಥ್​ ಗೌಡ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸ್​ ಸ್ಟೇಷನ್​ನಲ್ಲಿ ದೂರು ಕೂಡ ದಾಖಲಾಗಿದೆ.

About The Author