Wednesday, August 20, 2025

Latest Posts

Dharwad: ಕಳ್ಳರ ಮೇಲೆ ಫೈರಿಂಗ್ ಕೇಸ್: ಇಬ್ಬರನ್ನು ಹಿಡಿದಿದ್ದೇವೆ, ಓರ್ವನಿಗಾಗಿ ಹುಡುಕಾಟ ನಡೆದಿದೆ: ಕಮಿಷನರ್

- Advertisement -

Dharwad News: ಧಾರವಾಡ: ಕಳ್ಳರ ಮೇಲೆ ಪೋಲೀಸರಿಂದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲೀಸ್ ಆಯುಕ್ತ ಶಶಿಕುಮಾರ್, ಆಸ್ಪತ್ರೆಗೆ ಭೇಟಿ ನೀಡಿದ್ದರು.

ಗುಂಡೇಟು ತಾಕಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೋಲೀಸ್ ಅಧಿಕಾರಿಗಳಾದ ಪಿಎಸ್‌ಐ ಮಲ್ಲಿಕಾರ್ಜುನ್ ಮತ್ತು ಕಾನ್ಸ್‌ಟೇಬಲ್ ಇಸಾಕ್ ಅವರನ್ನು ನೋಡಲು ಬಂದಿದ್ದ ಶಶಿಕುನಮಾರ್ಇದೇ ವೇಳೆ ಗುಂಡೇಟು ತಿಂದ ಕಳ್ಳರನ್ನೂ ಪರಿಶೀಲಿಸಿದ್ದಾರೆ.

ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಕಮಿಷನರ್ ಶಶಿಕುಮಾರ್, ಧಾರವಾಡ ಕಲಘಟಗಿ ರಸ್ತೆಯ ಪೊಲೀಸ್ ಟ್ರೆನಿಂಗ್ ಸ್ಕೂಲ್ ಬಳಿ ಒರ್ವನ ಮೇಲೆ ದಾಳಿ ಮಾಡಿದ್ದ ಮೂರು ಕಳ್ಳರು ಬೈಕ್ ಕಸಿದುಕೊಳ್ಳಲು ಯತ್ನಿಸಿದ್ದಾರೆ.  ನಂತರ ಅಲ್ಲಿಂದ ಕಳ್ಳರು ಪರಾರಿಯಾಗಿದ್ದರು. ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಧಾರವಾಡ ನಗರದ ಮೂರು ಠಾಣೆಯವರು ಚೆಕ್ ಪೋಸ್ಟ ಹಾಕಿದ್ರು. ಆಗ ಬೆಳಗಿನ ಜಾವ ಹುಸೇನ್‌ಸಾಬ ಎಂಬುವವಮಿಗೆ ಹಿಡಿಯಲಾಗಿತ್ತು. ಈತ 35 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಈತ ಕಳ್ಳತನ ಮಾಡುತಿದ್ದ.

ಆತನನ್ನ ಹಿಡಿದುಕೊಂಡು ಜೊತೆಗಿದ್ದ ಮತ್ತೊಬ್ಬ ಕಳ್ಳ ಇರುವ ಜಾಗಕ್ಕೆ ಹೋದಾಗ ಅಲ್ಲಿ ಇಬ್ಬರು ಇದ್ದರು. ಪೊಲೀಸರು ಹಿಡಿಯಲು ಹೋದಾಗ ಹುಸೇನಸಾಬ ಪೊಲೀಸರಿಗೆ ದಬ್ಬಿ ಒಡಲು ಪ್ರಯತ್ನ ಮಾಡಿದ್ದ. ಆತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆಗ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ವಶಕ್ಕೆ ಪಡೆದು‌ ವಿಚಾರಣೆ ನಡೆಸುತ್ತೇವೆ ಎಂದು ಕಮಿಷನರ್ ಹೇಳಿದ್ದಾರೆ.

ವಿಜಯ ಅಣ್ಣಿಗೇರಿ ಮೇಲೆ ಕೂಡಾ 35 ಕ್ಕೂ ಹೆಚ್ಚು ಪ್ರಕರಣ ಇವೆ. ಕೆಲವು ಡಿಟೆಕ್ಟ್ ಆಗಿವೆ. ಇನ್ನೂ ಕೆಲವು ಆಗಬೇಕಿದೆ. ವಾಂಟೆಡ್‌ ಇದ್ದವರು‌ ಇವರು ಇಬ್ಬರು ರಾಜೀವಗಾಂಧಿನಗರದವರು. ಇವರರು ಒಂದು‌ ಕಳ್ಳರ‌ ಟೀಮ್ ಇದೆ. ಮೊಬೈಲ್ ಬಳಸಿದರೆ ಪೊಲೀಸರು ಹಿಡಿಯಬಹುದು ಎಂದು ಇನ್ಸ್ಟಾ ಮುಖಾಂತರ ಇವರು ಒಬ್ಬರಿಗೆ ಒಬ್ಬರು ಕಮ್ಯನಿಕೆಟ್ ಮಾಡುತಿದ್ದರು. ಸದ್ಯ ತಪ್ಪಿಸಿಕೊಂಡು ಹುಸೇನಸಾಬಗೆ ಹುಡುಕಾಟ ನಡೆಸಿದ್ದೆವೆ. ಸದ್ಯ ಮುಜಮ್ಮಿಲ್ ಮತ್ತು ವಿಜಯ ಹಿಡಿಯುವಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಪಿಎಸ್ಐ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರ ಕಾಲಿಗೆ ಎರಡು‌ ಗುಂಡು ಹಾರಿಸಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

- Advertisement -

Latest Posts

Don't Miss