Dharwad: ಧಾರವಾಡ: ಮಾಜಿ ಸೈನಿಕನ ಮೇಲೆ ಪೋಲೀಸರಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲೀಸ್ ಕಮಿಷನರ್ ಇಬ್ಬರು ಪೋಲೀಸರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಬಳಿಕ ಮಾಧ್ಯಮಗಳ ಜತೆ ಮತನಾಡಿರುವ ಕಮಿಷನರ್ ಎನ್.ಶಶಿಕುಮಾರ್, ಸೆಪ್ಟೆಂಬರ್ 28ರಂದು ಇಂಡಿಯಾ ಪಾಕಿಸ್ತಾನ ಮ್ಯಾಚ್ ನಡೆದಿತ್ತು. ನಮ್ಮ ಪೋಲಿಸರು ಗಸ್ತು ತಿರುಗುತ್ತಿದ್ದರು. ವಿವೇಕಾನಂದ ಸರ್ಕಲ್ ನಲ್ಲಿ ಸೈನಿಕ ಎಂದು ಮೆಸ್ ಸ್ಟಾರ್ಟ್ ಇತ್ತು. ಅದನ್ನ ಕ್ಲೋಸ್ ಮಾಡಿ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಮಾಜಿ ಸೈನಿಕನ ಮೆಲೆ ನಮ್ಮ ಸಿಬ್ಬಂದಿಗಳು ಹಲ್ಲೆ ಮಾಡಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.
ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಮಾಜಿ ಸೈನಿಕ ರಾಮು ನಿಪ್ಪಾಣಿ ಪತ್ನಿ ಕೊಟ್ಟ ದೂರಿನ ಅನ್ವಯ ಪ್ರಕರಣದ ತನಿಖೆ ಮಾಡಿದ್ದೇವೆ. ಇಬ್ಬರು ನಮ್ಮಪೋಲಿಸ್ ಸಿಬ್ಬಂದಿಗಳು ಅನುಚಿತ ವರ್ತನೆ ತೋರಿದ್ದಾರೆ. ನಿಯಮಬಾಹಿರವಾಗಿ ಹಲ್ಲೆ ಮಾಡಿದ ಹಿನ್ನಲೆ, ಇಬ್ಬರು ಪೋಲಿಸ್ ಪೇದೆಗಳನ್ನ ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಅವರ ನಡುವಳಿಕೆ ಸರಿ ಇಲ್ಲ. ಎ ಸ್ ಐ ವಿದ್ಯಾನಂದ ಸುಬೇದಾರ ಮತ್ತು ಪೇದೆ ರಾಚಪ್ಪ ಅವರನ್ನ ಅಮಾನತು ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಇಬ್ಬರನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗಿದೆ. ಪೇದೆ ರಾಚಪ್ಪನಿಗೂ ಮಾಜಿ ಸೈನಿಕ ಹಲ್ಲೆ ಮಾಡಿದ್ದಾನೆ. ಎರಡು ಕಡೆ ದೂರು ದಾಖಲಾಗಿದೆ. ಸದ್ಯ ಇಗ ಎರಡು FIR ದಾಖಲು ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಧಾರವಾಡದಲ್ಲಿ ಹುಬ್ಬಳ್ಳಿ_ಧಾರವಾಡ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.




