Dharwad: ಕುಂದಗೋಳ : ಗ್ರಾಮ ಪಂಚಾಯಿತಿ ಸದಸ್ಯರೇ ಮಗನ ಗ್ರಾಮ ಪಂಚಾಯಿತಿ ಕಾಮಗಾರಿ ನಿರ್ವಹಿಸಿ ತನ್ನ ಖಾತೆಗೆ ಲಕ್ಷ ಲಕ್ಷ ಹಣ ಪಡೆದು ವಿಷಯ ಬಟಾ ಬಯಲಾಗದರೂ ಸದಸ್ಯತ್ವ ಮಾತ್ರ ರದ್ದಾಗಿಲ್ಲಾ.
ಹೌದು ! ಕುಂದಗೋಳ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪ್ರಸ್ತುತ ಹಾಲಿ ಸದಸ್ಯೆ ಸರೋಜವ್ವಾ ಕಾಳೆ ಎಂಬುವವರ ಮಗ ಪ್ರವೀಣ್ ಕಾಳೆ ತಾನು ಸದಸ್ಯರು ಮಗ ಎಂಬುದನ್ನು ಮರೆತು ಗ್ರಾಮ ಪಂಚಾಯಿತಿ ಗುತ್ತಿಗೆದಾರರನಾಗಿ ಪಂಚಾಯತ್ ರಾಜ್ ಇಲಾಖೆ ನಿಯಮಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದಾನೆ.
ಗುಡೇನಕಟ್ಟಿ ಗ್ರಾಮ ಪಂಚಾಯಿತಿ 2025-26ನೇ ಸಾಲಿನ 15ನೇ ಹಣಕಾಸಿನ ಅಡಿಯಲ್ಲಿ ನಾಲ್ಕು ಕಾಮಗಾರಿ ನಿರ್ವಹಿಸಿ ಬರೋಬ್ಬರಿ 3.37.377 ರೂಪಾಯಿ ತನ್ನ ಖಾತೆಗೆ ಪಡೆದಿದ್ದಾನೆ.
ಈ ವಿಷಯವನ್ನೂ ಮೊದಲೇ ಪ್ರಸಾರ ಮಾಡಿದ ಕರ್ನಾಟಕ ಟಿವಿ ತನಿಖೆ ಒತ್ತಾಯಿಸಿದ ಬಳಿಕ ಗ್ರಾಮ ಪಂಚಾಯಿತಿ ಸದಸ್ಯರ ಮಗ ಹಣ ಪಡೆದ ವಿಷಯವನ್ನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಬಹಿರಂಗ ಪಡಿಸಿದ್ದಾರೆ ವಿನಾಃ ಸದಸ್ಯತ್ವ ರದ್ದತಿ ಬಗ್ಗ ಬಗ್ಗೆ ಯಾವುದೇ ನಿರ್ಧಾರ ನೀಡಿಲ್ಲಾ.
2025 ಜುಲೈ 19 ರಂದೇ ಗ್ರಾಮ ಪಂಚಾಯಿತಿ ಸದಸ್ಯರ ಮಗ 3.37.377 ರೂಪಾಯಿ ಪಡೆದರೂ ಸದಸ್ಯತ್ವ ರದ್ದಾಗದೇ ಇರೋದು ಆಡಳಿತ ವೈಖರಿ ಹಿನ್ನಡೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಭುವನೇಶ್ ಪಾಟೀಲ್ ಗಮನಿಸಿ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ




