Dharwad: ಮನೆಗೆ ನುಗ್ಗಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಹ* ಮಾಡಿದ ದುಷ್ಕರ್ಮಿಗಳು..

Dharwad News: ಧಾರವಾಡ : ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನು ಅವರ ಮನೆಯಲ್ಲಿ ಕೊಲೆ ಮಾಡಿರುವ ಘಟನೆ ನಗರದ ಹಾಶ್ಮಿನಗರದಲ್ಲಿ ನಡೆದಿದ್ದು, ಕೊಲೆ ಆರೋಪಿಗಳ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫೈರೋಜ್ ಪಠಾಣ್ ಕೊಲೆಯಾದ ಯುವಕ. ಅವರಿರುವ ಮನೆಯಲ್ಲಿ ಕೊಲೆ ಮಾಡಲಾಗಿದೆ. ಹತ್ಯೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೊಂದು ರಾಜಕೀಯ ಪ್ರೇರಿತವಾದ ಹತ್ಯೆ ಎಂದು ಫೈರೋಜ್ ಮನೆಯವರು ಆರೋಪಿಸಿದ್ದಾರೆ. ಮೃತ ಫೈರೋಜ್ ರಾಜಕೀಯವಾಗಿ ಬೆಳೆದಿದ್ದರು. ಇದೇ ತಿಂಗಳು 24 ರಂದು ಮದುವೆ ಸಹ ನಿಶ್ಚಯವಾಗಿತ್ತು. ಫೈರೋಜ್ ಪಠಾಣ್ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದರು.

ಸ್ಥಳೀಯ ವ್ಯಕ್ತಿಗಳಿಂದ ಹತ್ಯೆ ಆರೋಪ : ಫೈರೋಜ್ ಮನೆಗೆ ತೆರಳಿ ರೂಮ್​ನ ಬಾಗಿಲು ಹಾಕಿಕೊಂಡಿದ್ದರೂ ಸಹ ಬಾಗಿಲು ಮುರಿದು ನಾಲ್ಕು ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ. ಸ್ಥಳೀಯ ವ್ಯಕ್ತಿಗಳೇ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸ್ಥಳದಲ್ಲಿ ನಡೆದ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇದನ್ನು ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸದ್ಯ ಸ್ಥಳಕ್ಕೆ ಹು-ಧಾ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author