Dharwad News: ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಕೆರೆ ನೀರು ಕುಡಿದು 15 ಜನ ಅಸ್ವಸ್ಥರಾಗಿದ್ದಾರೆ.
ಕೆರೆ ನೀರು ಕುಡಿದ ಪರಿಣಾಮ ಗ್ರಾಮಸ್ಥರಿಗೆ ವಾಂತಿ, ಬೇಧಿ ಶುರುವಾಗಿದೆ. ನಿರಂತರ ವಾಂತಿ, ಬೇಧಿಯಿಂದ ಜನ ಕಂಗಾಲಾಗಿದ್ದು, 15ಕ್ಕೂ ಹೆಚ್ಚು ಜನ ನವಲಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಹಶೀಲ್ದಾರ್, ಡಿಹೆಚ್.ಓ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




