Monday, July 22, 2024

Latest Posts

Dharwad News: ಅಂತ್ಯಕ್ರಿಯೆಯ ವೇಳೆ ಶವದ ಮೇಲೆ ಬಂದು ಕುಳಿತ ಮಂಗ

- Advertisement -

Dharwad News: ಧಾರವಾಡ: ಧಾರವಾಡದ ನವಲಗುಂದದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮೃತಪಟ್ಟ ವ್ಯಕ್ತಿಯೋರ್ವನ ಅಂತ್ಯಕ್ರಿಯೆಯ ವೇಳೆ ಮಂಗ ಬಂದು ಶವದ ಮೇಲೆ ಕುಳಿತಿದೆ.

ನವಲಗುಂದದವೇ ಆಗಿದ್ದ ರವಿ ಮಾಗ್ರೆ(35) ಎಂಬ ವ್ಯಕ್ತಿ ಮೊನ್ನೆ ಹೃದಯಾಘಾತದಿಂದ ನಿಧನರಾಗಿದ್ದರು. ನಿನ್ನೆ ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಸಲಾಗಿತ್ತು. ಮೃತದೇಹಕ್ಕೆ ಕಟ್ಟಿಗೆ ಇಟ್ಟು ಸುಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಂಗಗವೊಂದು ಬಂದು, ಆ ಶವದ ಮೇಲೆ ಕುಳಿತಿತ್ತು.

ಕೆಲ ಹೊತ್ತಿನ ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಿದ ಮೇಲೆ ಮಂಗ ಶವದಿಂದ ಕೆಳಗೆ ಇಳಿಯಿತು. ಕೆಲ ಗಂಟೆಗಳ ಕಾಲ ಮಂಗ ಅಲ್ಲೇ ಕುಳಿತು ಅಂತ್ಯಸಂಸ್ಕಾರವನ್ನು ಕೂಡ ನೋಡಿತು. ಈ ಎಲ್ಲ ದೃಶ್ಯ ಅಲ್ಲೇ ಇದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

- Advertisement -

Latest Posts

Don't Miss