Dharwad News: ಗೋವಿನ ಜೋಳದ ಬೆಳೆ ನಾಶವಾದ ಕಾರಣ ಆತ್ಮ*ಹತ್ಯೆಗೆ ಶರಣಾದ ರೈತ

Dharwad News: ಕುಂದಗೋಳ: ಧಾರವಾಡದ ಕುಂದಗೋಳದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತೀವೃಷ್ಟಿ ಮಳೆಯಿಂದ ಗೋವಿನ ಜೋಳದ ಬೆಳೆ ನಾಶವಾಗಿದ್ದು, ಇದಕ್ಕೆ ಮನನ“ಂದ ರೈತ, ಜೀವ ಹಾನಿಮಾಡಿಕ“ಂಡಿದ್ದಾರೆ.

ಬುತರ್ಲಘಟ್ಟ ಗ್ರಾಮದ ರುದ್ರಗೌಡ ಹುತ್ತನಗೌಡ ರಾಮನಗೌಡ್ರ ಎಂಬ ರೈತ ಆತ್ಮಹತ್ಯೆಗೀಡಾಗಿದ್ದು, ರೈತನಿಗೆ ಒಟ್ಟು 3‌ ಜಮೀನು ಇತ್ತು. ಹಾಗಾಗಿ ಜಮೀನಿನಲ್ಲಿ ಉತ್ತಮ ಬೆಳೆ ಬರಿಸಲು ರೈತ, ಕೆವಿಜಿ & ಸಹಾಕಾರಿ ಬ್ಯಾಂಕ್ನಿಂದ ಸಾಲ ಒಟ್ಟು 8 ಲಕ್ಷ ಸಾಲ ಮಾಡಿದ್ದಾರೆ. ಆದರೆ ಬೆಳೆ ಕೈಗೆ ಸಿಗದೇ, ನಷ್ಟವಾದ ಕಾರಣ, ತರ್ಲಘಟ್ಟ ಗ್ರಾಮದಲ್ಲಿ ಬಸ್ ನಿಲ್ದಾಣ ಹತ್ತಿರ ವಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಭವಿಸಿದೆ.

ಬು ತರ್ಲ ಘಟ್ಟ ಗ್ರಾಮ ಪಂಚಾಯತಿ ಪಿಡಿಓ ಮುನಚ್ಚೆರಿಕೆ ಕ್ರಮವಾಗಿ ಕೆರೆಯ ಸುತ್ತಲೂ ಸೂಚನಾ ಪಲಕ ಹಾಕಿದ್ದರು. ಆದರೂ ಇಂಥ ಘಟನೆ ನಡೆದಿದ್ದು, ಗ್ರಾ ಪಂ ಅಧ್ಯಕ್ಷ ಮತ್ತು ಪಿಡಿಓ ಕೂಡಲೆ ತಾ ಪಂ ಇ ಓ ಗಮನ ಹರಿಸಿ ಕೆರೆಯ ಸುತ್ತಲೂ ತಂತಿ ಬೇಲೆ ಹಾಕಿಸಲು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

About The Author