Dharwad News: ಧಾರವಾಡ : ಕೃಷಿ ಚಟುವಟಿಕೆಗಾಗಿ ವಿವಿಧೆಡೆ ಮಾಡಿದ ಸಾಲವನ್ನು ತೀರಿಸಲಾಗದೇ ರೈತನೋರ್ವ ವಿಷಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಸಮೀಪದ ಹನುಮನಹಾಳ ಗ್ರಾಮದಲ್ಲಿ ನಡೆದಿದೆ.
ಹನುಮನಹಾಳ ಗ್ರಾಮದ ಮೆಳೆಪ್ಪ ಗಬ್ಬೂರ (52) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡವನು.
ಮೆಳೆಪ್ಪ ಹನುಮನಹಾಳ ಗ್ರಾಮದ ಬಳಿ 2 ಎಕರೆ 16 ಗುಂಟೆ ಜಮೀನು ಹೊಂದಿದ್ದ. ಕೃಷಿ ಚಟುವಟಿಕೆಗಾಗಿ ಉಪ್ಪಿನ ಬೆಟಗೇರಿ ಗ್ರಾಮದ ಕೆವಿಜಿ ಬ್ಯಾಂಕ್‌ನಲ್ಲಿ 2 ಲಕ್ಷ ಸಾಲ ಪಡೆದುಕೊಂಡಿದ್ದ. ಬೆಳೆ ಕೈಕೊಟ್ಟಿದ್ದರಿಂದ ಆ ಸಾಲ ತೀರಿಸಲು ಹಾಗೂ ತನ್ನ ಹೆಣ್ಣು ಮಕ್ಕಳ ಮದುವೆಗಾಗಿ ಇದ್ದ ಜಮೀನನ್ನು ಬೇರೆಯವರಿಗೆ 7 ಲಕ್ಷ ರೂಪಾಯಿಗೆ ಲೀಸ್‌ಗೆ ಹಾಕಿದ್ದ.
ಈ ಸಾಲ ತೀರಿಸಲು ಧರ್ಮಸ್ಥಳ ಸಂಘದಲ್ಲಿ 2 ಹಾಗೂ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ 1 ಲಕ್ಷ ಸಾಲ ಪಡೆದಿದ್ದ. ಈ ಸಾಲ ತೀರಿಸಲಾಗದೇ ಮನನೊಂದ ರೈತ ಮೆಳೆಪ್ಪ ವಿಷಕಾರಿ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




