Dharwad News: ಟಿನ್ನರ್ ಮೂಲಕ ಆವರಿಸಿದ ಬೆಂಕಿ, ಬಾಲಕನ ದುರ್ಮರಣ

Dharwad News: ಮನೆಯಲ್ಲಿನ ಚಿಕ್ಕದೊಂದು ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅವಘಡಕ್ಕೆ ಕಾರಣವಾಗತ್ತೆ ಎಂಬ ಮಾತಿಗೆ ಧಾರವಾಡ ಕೆಲಗೇರಿ ರಸ್ತೆಯ ಸಂತೋಷ ನಗರದ 2 ನೇ ಕ್ರಾಸ್‌ನಲ್ಲಿ ನಡೆದ ಘಟನೆಯೊಂದು ಸಾಕ್ಷ್ಯಯಾಗಿದೆ. ನಿನ್ನೆ ಆಗಸ್ಟ್ 15 ರಂದು ದೇಶದೆಲ್ಲಡೆ ಸಂಬ್ರಮಾಚರಣೆ ಮಾಡುತ್ತಿತ್ತು. ಆದರೆ ಮನೆಯಲ್ಲಿ ಚಳಿ ಇದೆ ಎಂದು ಕಾಯಿಸಿಕ್ಕೊಳ್ಳಲು ಕುಪ್ಪಡಗಿಯನ್ನ ಹಾಕಿ ಬೆಂಕಿ ಹಚ್ಚಲಾಗಿತ್ತು.

ಆದರೆ ಪಕ್ಕದಲ್ಲೆ ಇರುವ ಟಿನ್ನರ್ ಬಾಟಲ್ ನ್ನ ಅಗಸ್ತ್ಯ ಮಾಶಾಳ್ ಎಂಬ 5 ವರ್ಷದ ಬಾಲಕ ಆಡವಾಡುತ್ತಾ ನೆಲಕ್ಕೆ ಉರಿಳಿಸಿದ್ದಾನೆ‌. ಆದರೆ ಆ ಬೆಂಕಿ ಟಿನ್ನರ್ ಗೆ ತಾಗಿ ಬಾಲಕನ ದೇಹಕ್ಕೆ ಆವರಸಿಕ್ಕೊಂಡು 5 ವರ್ಷದ ಬಾಲಕ ಸುಟ್ಟು ಹೋಗಿದ್ದಾನೆ. ಈ ಎಲ್ಲ ವಿಡಿಯೋ ಎದುರು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬಳಿಕ ಮನೆಯಲ್ಲಿ ಇರುವ ತಂದೆ ಚಂದ್ರಕಾಂತಗೂ ಬೆಂಕಿತಾಗಿದೆ ಬಳಿಕ ತಂದೆ ಮಗ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಇನ್ನು ತಂದೆ ಚಂದ್ರಕಾಂತನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಉಪನಗರ ಪೋಲಿಸರು ಬೇಟಿ ನೀಡಿ ಪ್ರಕರಣವನ್ನ ದಾಖಲು ಮಾಡಿಕ್ಕೊಂಡಿದ್ದಾರೆ…

ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಧಾರವಾಡ

About The Author