Dharwad News: ಕಳೆದ ಗುರುವಾರ ಧಾರವಾಡ ನಗರದ ಕಂಠಿಗಲ್ಲಿಯಲ್ಲಿ ಹಣದ ವಿಚಾರಕ್ಕೆ ಹಣ ಸಾಲ ಪಡೆದ ತಮ್ಮಣ್ಣಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಧಾರವಾಡದಲ್ಲಿ ಉಪ ನಗರ ಠಾಣೆಯ ಪೊಲೀಸರ ಗನ್ ಸದ್ದು ಮಾಡಿದೆ. ಚಾಕು ಇರಿದು ಪರಾರಿಯಾಗಿದ್ದ ಆರೋಪಿಯ ಕಾಲಿಗೆ ಗುಂಡೇಟು ನೀಡಿ ಬಂಧನ ಮಾಡಿದ್ದಾರೆ.
ಧಾರವಾಡ ಕಂಠಿಗಲ್ಲಿಯ ನಿವಾಸಿ ರಾಘವೇಂದ್ರನಿಂಗೆ ಮಲ್ಲಿಕ್ ಆರೋಪಿ ಚಾಕು ಇರಿದು ಪರಿಯಾರಿಯಾಗಿದ್ದನ್ನು. ಚಾಕು ಇರಿತದಿಂದ ರಾಘವೇಂದ್ರನಿಗೆ ತೀವ್ರವಾದ ಗಾಯಾಗಿತ್ತು. ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇನ್ನೂ ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆಯ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದು, ಅರೋಪಿ ಖವಾಜ ಶಿರಹಟ್ಟಿ ಬಂಧನ ಮಾಡಲು ಮುಂದಾದ ವೇಳೆ ಇನ್ನೋರ್ವ ಆರೋಪಿ ಮಾಹಿತಿ ನೀಡುವುದಾಗಿ ಹೇಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಆತ್ಮ ರಕ್ಷಣೆಗಾಗಿ ಇನ್ಸ್ಪೆಕ್ಟರ್ ದಯಾನಂದ ಶೆಗುಣಸಿ ಹಾಗೂ ಸಿಬ್ಬಂದಿ ಆರೋಪಿ ಖವಾಜ್ ಶಿರಹಡ್ಟಿ ಕಾಲಿಗೆ ಗುಂಡೇಟು ನೀಡಿ ಬಂಧನ ಮಾಡಲಾಗಿದೆ.
ಇನ್ನೂ ಆರೋಪಿ ಕಾಲಿಗೆ ಗುಂಡೇಡು ಬಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾರವಾಡ ಪೊಲೀಸ್ ಕಮಿಷನರೇಟ್ ಹಿರಿಯ ಅಧಿಕಾರಿಗಳು ಭೇಅಇ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸದ್ಯ ಗುಂಡೇಟು ತಿಂದ್ದ ಆರೋಪಿಯನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.