Dharwad News: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಮುಖ್ಯಶಿಕ್ಷಕನಿಂದ ಲೈಂಗಿಕ ದೌರ್ಜನ್ಯ.!

Dharwad News: ನವಲಗುಂದ: ನೈತಿಕ ಪಾಠ ಮಾಡಬೇಕಾದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕನೇ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಕೃತ್ಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.

ಬುಧವಾರ (ಮಾರ್ಚ್‌ 18ರಂದು) ಸಂಜೆ 4:30 ಸುಮಾರಿಗೆ ಮುಖ್ಯಶಿಕ್ಷಕ ಬಾಲಕಿಯನ್ನು ತನ್ನ ಕಚೇರಿ ಸಮೀಪದ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷಕನ ವರ್ತನೆಯಿಂದ ಗಾಬರಿಗೊಂಡ ಬಾಲಕಿ ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದಾಳೆ.

ಈ ಸಂಬಂಧ ಬಾಲಕಿಯ ತಾಯಿ ನವಲಗುಂದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಧಾರವಾಡ

About The Author