Dharwad News: ಧಾರವಾಡ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಧಾರವಾಡದಲ್ಲಿ ಯುಪಿಎಸ್‌ಸಿ ತಯಾರಿ ಮಾಡುತ್ತಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಜೀವಿತಾ ಕುಸಗೂರ (26) ಎಂಬ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈಕೆ ಧಾರವಾಡ ನಗರದ ಪುರೋಹಿತ್ ನಗರದ ನಿವಾಸಿಯಾಗಿದ್ದಾಳೆ. ನಿನ್ನೆ ಬೆಳಿಗ್ಗೆ ಯುವತಿ ತಲೆಸುತ್ತು ಬರುತ್ತಿದೆ, ಸುಸ್ತಾಗುತ್ತಿದೆ ಎಂದು ಕುಳಿತಿದ್ದಳು. ಬಳಿಕ ಆಕೆಯ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದ“ಯ್ಯುವಾಗ, ಯುವತಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಗೆ ಹೋಗಿ ವೈದ್ಯರನ್ನ ತೊರಿಸಿದಾಗ ಹೃದಯಾಘಾತ ಸಾವಾಗಿದೆ ಎಂದು ವೈದ್ಯರು ಡಿಕ್ಲೆರ್ ಮಾಡಿದ್ದಾರೆ.
ಜೀವಿತಾ ಎಂಎಸ್ಸಿ ಅಗ್ರಿ ಮಾಡಿದ್ದು, ಈಕೆಯ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಮಗಳು ಯುಪಿಎಸ‌್‌ಸಿ ಪರೀಕ್ಷೆ ಪಾಸ್ ಆಗಲಿ ಎಂದು ಕನಸು ಕಂಡಿದ್ದರು. ಆದರೆ ನಿನ್ನೆ ದುರಾದೃಷ್ಟವಶಾತ್ ಜೀವಿತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.