Dharwad News: ಫಾರ್ ದ ಫಸ್ಟ್ ಟೈಂ ಎರಡು ಪಕ್ಷಗಳು ಧರ್ಮಸ್ಥಳ ವಿಚಾರದಲ್ಲಿ ಸಮಾನ ಆಲೋಚನೆ ಮಾಡಿವೆ. ಸಹಜವಾಗಿ ಬಿಜೆಪಿ ಹಿಂದುತ್ವದ ವಿಚಾರವಾದಿಯಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯಕ್ಷ್ಯವಾಗಿ ಹೇಳಿದ್ದರು. ಅಲ್ಲೊಂದು ಭಯಾನಕ ಷಡ್ಯಂತ್ರ ಇದೆ. ಅದನ್ನು ಸಮಯ ಬಂದಾಗ ಹೊರಹಾಕುತ್ತೇನೆ ಎಂದು ಹೇಳಿದ್ದರು. ಇದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆ ಎಳೆಯುವ ಅಗತ್ಯ ಇದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲಿ ಒತ್ತಾಯಿಸಿದರು.
ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರೆಯೆ ನೀಎಇದ ಅವರು, ಎಲ್ಲಿ ಅನ್ಯಾಯ ನಡೆಯುತ್ತಿದೆಯೋ ಅಲ್ಲಿ ಅನ್ಯಾಯ ಆಗುತ್ತಿದೆ ಎಂದು ಹೇಳುವುದು ಸಹಜ. ಇದು ಒಂದೆರಡು ದಿನಗಳ ಕಾಲದ ಪ್ರಯತ್ನ ಅಲ್ಲ. ಸರಿಸುಮಾರು 13 ವರ್ಷಗಳ ಕಾಲ ನಿರಂತರವಾಗಿ ಧರ್ಮಸ್ಥ ದೇವಸ್ಥಾನ ಹಾಗೂ ಅಲ್ಲಿನ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಲೇ ಬಂದಿದೆ ಎಂದು ಅವರು ಹೇಳಿದರು.
ಬಾಯಿ ತೆಗೆದರೆ ಹೊಲಸು ಮಾತನಾಡುವ ಕೆಲವು ಜನಗಳು ಸೇರಿಕೊಂಡು ಹಿಂದೂ ಧರ್ಮದ, ಧರ್ಮೀಯರ ಶ್ರದ್ಧೆಯನ್ನು ಆಸ್ತಿಯನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಸಹ ಅದನ್ನು ಒಪ್ಪಿಕೊಂಡಿದೆ. ಇದನ್ನ ಸ್ವತಃ ಕಾಂಗ್ರೆಸ್ ಕೆಲ ಮಂತ್ರಿಗಳು ಸಹ ಹೇಳಿದ್ದಾರೆ. ಇದನ್ನ ಕೇವಲ ಒತ್ತಡಕ್ಕೆ ಮಣಿದ ತನಿಖೆಗೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಯಾರ ಒತ್ತಡಕ್ಕೆ ಮಣಿದು ತನಿಖೆಗೆ ನೀಡಿದೆ ಅನ್ನೋದನ್ನು ಸಿದ್ದರಾಮಯ್ಯ ಸರ್ಕಾರ ಹೇಳಬೇಕು.
ಸ್ವತಃ ಡಿಸಿಎಂ ಅವರೇ, ಇಷ್ಟು ಗುಂಡಿಗಳನ್ನು ತೆಗೆದರೂ ಏನು ಸಿಗದಿದ್ದಾಗ ಈ ತರಹದ ಆರೋಪ ಮಾಡಿದವರನ್ನೂ ಸಹ ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಇಷ್ಟು ದಿನಗಳಿಂದ ಇದರ ಹಿಂದೆ ಇದ್ದಂತವರನ್ನು ಎಲ್ಲದರ ಬಗ್ಗೆಯೂ ತನಿಖೆಗೆ ಒಳಪಡಿಸಬೇಕು ಎಂಬುದು ನನ್ನ ಆಗ್ರಹ. ಎಸ್ಐಟಿ ತನಿಖೆ ಮುಂದುವರಿಸುವ ಅವಶ್ಯಕತೆ ಇಲ್ಲ. ಅದರ ಉದ್ದೇಶ ಈಗ ಮುಗಿದಿದೆ. ಶವಗಳನ್ನು ಹೂತಿದ್ದೇನೆ ಎಂದು ಹೇಳಿದವನು ಮುಂದೆ ಮಂಗಳೂರಿನಲ್ಲಿ ಹೂತಿದ್ದೇನೆ ಎಂದು ಹೇಳಿದರೆ ತಂಡ ಅಲ್ಲಿಗೆ ಹೋಗಬೇಕಾ? ಈ ಪ್ರಶ್ನೆಗೆ ನೀವು ಉತ್ತರ ಕೊಡಬೇಕು ಎಂದು ಸೂಲಿಬೆಲೆ ಹೇಳಿದ್ದಾರೆ.
ನಾನು ನದಿಯ ಮಧ್ಯೆ ಭಾಗದಲ್ಲಿ ಹೂತಿದ್ದೇನೆ ಎಂದು ಆತ ಹೇಳುತ್ತಾನೆ, ಅಲ್ಲಿಯೂ ಹೋಗಬೇಕಾ? ಎಂದು ಸೂಲಿಬೆಲೆ ಪ್ರಶ್ನಿಸಿದರು. ಜತೆಗೆ ಈಗ 17-18 ಕಡೆ ಗುಂಡಿ ತೋಡಲಾಗಿದೆ. ನಾನು ಅದರ ಬಗ್ಗೆ ಫಾಲೋ ಮಾಡೋದನ್ನೇ ಬಿಟ್ಟಿದ್ದೀನಿ ಯಾಕೆ ಅಂದ್ರೆ ದಿನ ಬೆಳಗಾದರೆ ಎಲ್ಲೋ ತೋರಿಸುತ್ತಾನೆ ಅಲ್ಲಿ ಅಗಿಯುತ್ತಾರೆ ಇದು ಎಷ್ಟು ದಿನಗಳ ಕಾಲ ಹೀಗೇ ನಡೆಯಬೇಕು? ನಮ್ಮ ತೆರಿಗೆ ಹಣವನ್ನು, ಈ ರೀತಿ ಸುಳ್ಳು ಆರೋಪ ಮಾಡುವವರಿಗೆ ಖರ್ಚು ಮಾಡಬೇಕಾ ಅನ್ನೋದನ್ನು ರಾಜ್ಯದ ಜನತೆ ಕೇಳಬೇಕು. ತಕ್ಷಣವೇ ಸರ್ಕಾರ ಇದನ್ನು ನಿಲ್ಲಿಸಬೇಕು ಅನ್ನೋದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರವಾಗಿ ಮಾತನಾಡಿ, ಇದು ಒಳ್ಳೆಯ ಸಂಗತಿ, ಇದು ಯಾವತ್ತೋ ಆಗಬೇಕಿತ್ತು ಎಂದು ಸೂಲಿಬೆಲೆ ಹೇಳಿದ್ದಾರೆ.
ತಡವಾಗಿ ಆರಂಭವಾಗಿದೆ. ಇದು ನನಗೆ ಸಂತೋಷದ ಸಂಗತಿ. ನಾನು ಒಂದು ದಶಕಗಳ ಕಾಲದಿಂದ ಈ ಚಿಂತನೆಯಲ್ಲಿ ಇದ್ದೇನೆ. ನಾನು ಅದನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ಯಾವತ್ತೋ ಇದಕ್ಕೆ ವ್ಯಾಪಕ ಬೆಂಬಲ ಸಿಗಬೇಕಿತ್ತು. ಇಡೀ ರಾಜ್ಯದ ಜನ ಎಚ್ಚೆತ್ತುಕೊಂಡಿದೆ. ಈಗ ಸರ್ಕಾರ ಶೀಘ್ರವೇ ಎಸ್ಐಟಿ ತನಿಖೆಯ ವರದಿ ಹೊರಗೆ ತರಬೇಕು. ಎಸ್ಐಟಿ ರದ್ದು ಮಾಡದೇ ಇದ್ದರೆ ರಾಜ್ಯದಲ್ಲಿ ದೊಡ್ಡ ಆಂದೋಲನ ಆಗೋದರಲ್ಲಿ ಅಚ್ಚರಿ ಇಲ್ಲ. ದಿನ ಬೆಳಗಾದರೆ ಹಿಂದೂ ಧರ್ಮ ಕ್ಷೇತ್ರಗಳ, ಹಿಂದೂ ಧರ್ಮ ಪುರುಷರ ಬಗ್ಗೆ ಅವಹೇಳನ ನಡೆಯುತ್ತಿದೆ. ಮುಂದೆ ಇದರ ಬಗ್ಗೆ ಜನರು ಬೀದಿ ಬೀದಿಗಳಲ್ಲಿ ದಂಗೆ ಏಳುವ ಸ್ಥಿತಿ ನಿರ್ಮಾಣವಾದರೆ ಅದಕ್ಕೆ ಸಿದ್ದರಾಮಯ್ಯ ಹೊಣೆ ಆಗುತ್ತಾರೆ. ತಕ್ಷಣವೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಮೀನಮೇಷ ಎಣಿಸುತ್ತಾ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಎಸ್ಐಟಿ ತನಿಖೆ ನೋಡಿದ್ರೆ ಒಂದಾದರೂ ಹೆಣ ತೆಗೆದು ತೋರಿಸುವ ಧಾವಂತಕ್ಕೆ ಬಿದ್ದಂತೆ ಕಾಣಿಸುತ್ತೆ. ಇದನ್ನು ಕೊಡಲೇ ಇಲ್ಲಿಗೆ ನಿಲ್ಲಿಸದೇ ಹೋದರೆ ಇಡೀ ರಾಜ್ಯದಲ್ಲಿ ಉಂಟಾಗಬೇಕಾದ ದಂಗೆಗೆ ಸರ್ಕಾರವೇ ಕಾರಣ ಆಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.