Dharwad News: ಸೆರೆ ಸಿಕ್ಕ ಚಿರತೆ ನಿಟ್ಟುಸಿರು ಬಿಟ್ಟ ಗ್ರಾಮದ ಜನತೆ

Dharwad News: ಕಲಘಟಗಿ : ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆ ಇಂದು ಸೆರೆ ಸಿಕ್ಕಿದೆ.

ತಬಕದಹೊನ್ನಳ್ಳಿ ಗ್ರಾಮದ ಸುತ್ತ ಮುತ್ತಲಿನ ಹೊಲಗಳಲ್ಲಿನ ನಾಯಿ ಹಾಗೂ ಆಕಳುಗಳ ಮೇಲೆ ದಾಳಿ ಮಾಡಿದ್ದ ಚಿರತೆ ಒಂದು ತಿಂಗಳಿನಿಂದ ಭಯ ಹುಟ್ಟಿಸಿತ್ತು.

ಅರಣ್ಯ ಇಲ್ಲಾಖೆ ಅಧಿಕಾರಿಗಳು ಚಿರತೆ ಸೇರೆಗಾಗಿ ಗ್ರಾಮದ ಹೊರವಲಯದಲ್ಲಿ ಬೊನ್ ಇಟ್ಟು ಕಾರ್ಯಚರಣೆ ನಡೆಸಿದ್ದರು. ಇಂದು ಮುಂಜಾನೆ ಚಿರತೆ ಬೋನಿಗೆ ಬಿದ್ದಿದೆ.

ದಿನನಿತ್ಯ ಭಯದಿಂದ ಓಡಾಡುತ್ತಿದ್ದ ಗ್ರಾಮದ ಜನರು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

About The Author