- Advertisement -
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಂತ ಮಗನೇ ತಂದೆಯ ಹತ್ಯೆ ಮಾಡಿದ್ದಾನೆ. ಹುಬ್ಬಳ್ಳಿಯ ಗಿರಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಿರಿಯಾಲ ಗ್ರಾಮದ ಉಮೇಶ ಸುಡಕೇನವರ (೫೮) ಹತ್ಯೆಯಾದ ತಂದೆಯಾಗಿದ್ದಾರೆ.
ಹನುಮಂತಪ್ಪ ಎಂಬ ಮಗ, ತನ್ನ ತಂದೆಯ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುವ ವಿಚಾರಕ್ಕೆ ತಂದೆ- ಮಗನ ನಡುವೆ ಜಗಳವಾಗಿತ್ತು. ಈ ವೇಳೆ ಸಲಾಕೆಯಿಂದ ಹೊಡೆದು, ಹನುಮಂತಪ್ಪ ತಂದೆಯ ಕೊಲೆ ಮಾಡಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -