Movie News: ನಿರ್ದೇಶಕ ತರುಣ್ ಸುಧೀರ್, ನಟಿ ಸೋನಲ್‌ರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ವಿವಾಹಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ತರುಣ್ ಸುಧೀರ್ ಇಂದು ಜೈಲಿಗೆ ಬಂದು ನಟ ದರ್ಶನ್‌ಗೆ ಆಮಂತ್ರಣ ಪತ್ರ ನೀಡಿದ್ದಾರೆ.
ಆಗಸ್ಟ್ 10 ಮತ್ತು 11ರಂದು ತರುಣ್ ಮದುವೆ ನಡೆಯಲಿದ್ದು, ಗೆಳೆಯ ದರ್ಶನ್ ಜೈಲಿನಲ್ಲಿರುವ ಕಾರಣ, ಮದುವೆ ಮುಂದೂಡಬೇಕು ಎಂದು ತರುಣ್ ನಿರ್ಧರಿಸಿದ್ದರು. ಆದರೆ ದರ್ಶನ್ ಮತ್ತು ಕೆಲ ಆಪ್ತರು ಹೇಳಿದ ಕಾರಣ, ಮದುವೆ ಮುಂದೂಡದೇ, ನಿಗದಿಯಾದ ದಿನಾಂಕದಂದೇ, ಮದುವೆ ಮಾಡಲಾಗುತ್ತಿದೆ.
ಹಾಗಾಗಿ ತರುಣ್ ಸುಧೀರ್ ಇಂದು ಮೊದಲ ಕಾರ್ಡನ್ನು ಕುಟಿಕು ಗೆಳೆಯ ದರ್ಶನ್‌ಗೆ ಕೊಡಬೇಕು ಎಂದು ಜೈಲಿಗೆ ಹೋಗಿದ್ದರು. ಈ ವೇಳೆ ಗೆಳೆಯನಿಗೆ ಕಾರ್ಡ್ ಕೊಟ್ಟು, ದುಃಖ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ದರ್ಶನ್, ವಿವಾಾಹದ ದಿನಾಂಕ ಯಾವುದೇ ಕಾರಣಕ್ಕೂ ಚೇಂಜ್ ಮಾಡಬೇಡ. ನಾನು ಮದುವೆಗೆ ಬರ್ತೇನೆ ಎಂದು ಹೇಳಿದ್ದಾರೆ ಎಂದು ತರುಣ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಎ2 ಆರೋಪಿಯಾಗಿ, ಜೈಲು ಸೇರಿದ್ದಾರೆ. ಗೆಳತಿ ಪವಿತ್ರಾಗೆ ಗಲೀಜು ಪೋಟೋ, ಅಸಭ್ಯವಾಗಿ ಸಂದೇಶ ಕಳಿಸುತ್ತಿದ್ದನೆಂದು, ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಹೊಡೆದು ಬಡಿದು, ಹಿಂಸೆ ಕೊಟ್ಟು ಸಾಯಿಸಿತ್ತು. ಇದೇ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ.