Dharwad News: ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಕನ್ನಾ ಕಳ್ಳನನ್ನು ಬಂಧಿಸುವುಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 8ಲಕ್ಷ 50 ಸಾವಿರ ರೂಪಾಯಿ ಮೌಲ್ಯಗಳನ್ನು ಕಳ್ಳದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲ ಹಳೇ ಹುಬ್ಬಳ್ಳಿಯ ನಿವಾಸಿ ಹುಸೇನಸಾಬ್ ಕನವಳ್ಳಿ ಬಂಧಿತ ಚಾಲಾಕಿ ಕನ್ನಾ ಕಳ್ಳನಾಗಿದ್ದಾನೆ. ಕಳೆದ ಜುಲೈ 24 ರಂದು ಧಾರವಾಡದ ಕಲಘಟಗಿ ರಸ್ತೆಯ ಗಿರಿನಗರದ ಬಳಿ ಪೊಲೀಸ್ ಟ್ರೈನಿಂಗ್ ಸ್ಕೂಲ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಅಪರಿಚಿತರ ಪ್ರಯತ್ನಿಸಿದರು. ಈ ಕುರಿತು ದೂರುಪಡೆದುಕೊಂಡು ತನಿಖೆಗೆ ಮುಂದಾಗಿದ್ದ ಪೊಲೀಸರಿಗೆ ಕೊನೆಗೂ ಈ ಕನ್ನಾ ಕಳ್ಳ ಸಿಕಿಬಿದಿದ್ದಾನೆ.
ಸದ್ಯ ಈತನ ಬಂಧನದಿಂದ 9ಕಳ್ಳತನ ಪ್ರಕರಣಗಳು ಈಗ ಪತ್ತೆಯಾಗಿವೆ. ಬಂಧಿತನಿಂದ 8ಲಕ್ಷ 50ಸಾವಿರ ರೂಪಾಯಿ ಮೌಲ್ಯದ 59.5ಗ್ರಾಂ ಚಿನ್ನ, 1600 ಗ್ರಾಂ ಬೆಳ್ಳಿ ಸೇರಿ ನಗದು ಹಾಗೂ ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಜುಲೈ 24 ರಂದು ಬೈಕ್ ನಿಲ್ಲಿಸಿ ದೋಚಲು ಯತ್ನಿಸಿದ ಸಪರಿಚಿತರಲ್ಲಿ ಈಗಾಗಲೇ ಇಬ್ಬರನ್ನು ಬಂದನ ಮಾಡಿ ಕಂಬಿ ಹಿಂದೆ ತಳಿದ್ದು, ಈಗ ಮತ್ತೋರ್ವ ಆರೋಪಿ ಬಂದನದಿಂದ ಬಂಧಿತರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.