ಭಾರತಕ್ಕಿಂತ ಪಾಕ್‌ನಲ್ಲಿ ಹೆಚ್ಚಾಯ್ತು ಧುರಂಧರ್ 2 ಕ್ರೇಜ್: ಮುಗಿಬಿದ್ದು ಸಿನಿಮಾ ನೋಡ್ತಿದ್ದಾರಂತೆ ಜನ..

Bollywood News: ಪಾಕಿಸ್ತಾನದ ವಿರುದ್ಧ ಮಾಡಿರುವ ಧುರಂಧರ್-2 ರಿವೆಂಜ್ ಸಿನಿಮಾ ಭಾರತದಲಿ ಸಖತ್ ಹಿಟ್ ಆಗಿದೆ. ರಿಲೀಸ್ ಆದ ದಿನವೇ ಕೋಟಿ ಕೋಟಿ ಬಾಚಿದೆ.

ಅದು ಭಾರತದಲ್ಲಿ ಗೂಢಾಚಾರಿಯ ಬಗ್ಗೆ ಇರುವ ಸಿನಿಮಾ, ದೇಶದ ಬಗ್ಗೆ ಇರುವ ಸಿನಿಮಾ ಅಂತಾ ಭಾರತೀಯರು ನೋಡೋದು ಕಾಮನ್. ಆದರೆ ಪಾಕಿಸ್ತಾನದಲ್ಲೂ ಈ ಸಿನಿಮಾ ನೋಡಲು ಜನ ಮುಗಿಬೀಳ್ತಿದ್ದಾರಂತೆ. ಹಾಗಂತ ಅವರ್ಯಾರೂ ಆ ಸಿನಿಮಾವನ್ನು ಥಿಯೇಟರ್‌ಗೆ ಹೋಗಿ ನೋಡುತ್ತಿಲ್ಲ. ಏಕೆಂದರೆ, ಈ ಸಿನಿಮಾ ಪಾಕಿಸ್ತಾನದ ವಿರುದ್ಧವಾಗಿರುವ ಸಿನಿಮಾ ಆದ ಕಾರಣ, ಪಾಕಿಸ್ತಾನದಲ್ಲಿ ಧುರಂಧರ್ ಸಿನಿಮಾ ಬ್ಯಾನ್ ಮಾಡಲಾಗಿದೆ.

ಹಾಗಾಗಿ ಪೈರಸಿ ಕಾಪಿ ಸಿಕ್ಕಿದ್ದು, ಅದನ್ನೇ ಪಾಕಿಸ್ತಾನಿಗಳು ಕುತೂಹಲದಿಂದ ವೀಕ್ಷಿಸಿದ್ದಾರೆ. ಪತ್ರಕರ್ತರ“ಬ್ಬರು ಪೈರಸಿ ಕಾಪಿ ಕಂಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಲಾಹೋರ್‌ನಲ್ಲಿ ಕೂತು ಧುರಂಧರ್ 2 ನೋಡುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ.

ಇನ್ನು ಈ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಬಂದಿದ್ದು, ಟಿವಿ ಕ್ರ್ಯಾಕ್ ಆದ ಹಾಗಿದೆ. ಟಿ20 ವರ್ಲ್ಡ್ ಕಪ್ ಮ್ಯಾಚ್ ನೋಡಿದ್ರಾ ಅಂತಾ ಓರ್ವ ಗೇಲಿ ಮಾಡಿದ್ದಾನೆ. ಇನ್ನೋರ್ವ ಲಾಹೋರ್‌ನಲ್ಲಿ ಕುಳಿತು ಪಾಕಿಸ್ತಾನ ಬರ್ಬಾದ್ ಆಗೋದನ್ನ ನೋಡ್ತಿದ್ದಾನೆ ಅಂತಾ ಕಾಮೆಂಟ್ ಹಾಕಿದ್ದಾನೆ. ಇದೇ ರೀತಿ ಕಾಮಿಡಿ ಕಾಮೆಂಟ್ಸ್ ಬಂದಿದೆ.

About The Author