Tuesday, December 3, 2024

Latest Posts

New Delhi : ಯುವಿ ಭವಿಷ್ಯ ಹಾಳು ಮಾಡಿದ್ರಾ ಧೋನಿ? ಯುವರಾಜ್​​ ಸಿಂಗ್​​ ತಂದೆ ಹೀಗೆ ಹೇಳಿದ್ದೇಕೆ?

- Advertisement -

ನವದೆಹಲಿ: ಭಾರತೀಯ ಕ್ರಿಕೆಟ್​ ಲೋಕದ ದಂತಕಥೆಗಳಾದ ಮಾಜಿ ನಾಯಕ ಕಪಿಲ್​ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಯುವರಾಜ್ ಸಿಂಗ್​ ತಂದೆ ಹರಿಹಾಯ್ದಿದ್ದಾರೆ.. ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್ ತಂದೆ ಯೋಗರಾಜ್​ ಸಿಂಗ್, ಹಳೆಯ ವಿಚಾರಗಳನ್ನು ಕೆದಕಿ ಕಪಿಲ್​ ದೇವ್​ ಹಾಗೂ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಪಿಲ್​ ದೇವ್ ನಮ್ಮ ಕಾಲದ ಶ್ರೇಷ್ಠ ನಾಯಕ. ಇಂದು ಯುವರಾಜ್​ ಸಿಂಗ್ ಬಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ 13 ಟ್ರೋಫಿಗಳಿವೆ. ಆದ್ರೆ ನಿನ್ನ ಬಳಿ ಇರುವುದು ಒಂದೇ. ಅದು ವಿಶ್ವಕಪ್ ಟ್ರೋಫಿ ಮಾತ್ರ. ಇಡೀ ಜಗತ್ತೇ ನಿಮ್ಮನ್ನು ಶಪಿಸುವಂತಹ ಸ್ಥಿತಿಗೆ ನಿಮ್ಮನ್ನು ತಂದು ನಿಲ್ಲಿಸುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೆ ಎಂದು ಯುವರಾಜ್​ ಸಿಂಗ್ ತಂದೆ ಯೋಗರಾಜ್ ಸಿಂಗ್ ತೀಕ್ಷ್ಣ ಮಾತುಗಳಿಂದ ಟೀಕಿಸಿದ್ದಾರೆ.

ಕಪಿಲ್​ ದೇವ್​ ವಿರುದ್ಧ ಹರಿಹಾಯ್ದಿರುವ ಯೋಗರಾಜ್ ಸಿಂಗ್, ಕೂಲ್​ ಕ್ಯಾಪ್ಟನ್​ ಎಂ.ಎಸ್.ಧೋನಿ ವಿರುದ್ಧವೂ ಗುಡುಗಿದ್ದಾರೆ.. ನಾನು ಎಂದಿಗೂ ಆತನನ್ನು ಎಂದಿಗೂ ಕ್ಷಮಿಸುವುದಿಲ್ಲ. ಆತ ಕನ್ನಡಿಯಲ್ಲಿ ಒಮ್ಮೆ ಮುಖವನ್ನು ನೋಡಿಕೊಳ್ಳಲಿ. ಆ ವ್ಯಕ್ತಿ ನನ್ನ ಮಗನ ಜೀವನವನ್ನು ಹಾಳು ಮಾಡಿದ್ದಾನೆ. ನನ್ನ ಮಗ ಇನ್ನೂ 5 ವರ್ಷಗಳ ಕಾಲ ಆಡಬಹುದಿತ್ತು. ಆದ್ರೆ ಅದು ಆಗಲಿಲ್ಲ ಎಂದು ಯೋಗರಾಜ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ದೇಶಕ್ಕಾಗಿ ವಿಶ್ವಕಪ್ ಗೆದ್ದ ಯುವರಾಜ್ ಸಿಂಗ್ ಅವರಿಗೆ ಭಾರತ ರತ್ನ ಗೌರವ ಸಿಗಬೇಕು ಎಂದು ಹೇಳಿದರು. ಶ್ರೇಷ್ಠ ಕ್ರಿಕೆಟಿಗ ಎಂಬ ಒಂದೇ ಕಾರಣಕ್ಕೆ ನಾನು ಆತನನ್ನು ಗೌರವಿಸುತ್ತೇನೆ. ನನ್ನ ಜೀವನದಲ್ಲಿ ಎಂದಿಗೂ ನಾನು ಈ ಎರಡು ಕೆಲಸಗಳನ್ನು ಮಾಡುವುದಿಲ್ಲ. ಒಂದು ತಪ್ಪು ಮಾಡಿದವರನ್ನು ಎಂದಿಗೂ ಕ್ಷಮಿಸಿಲ್ಲ. ಎರಡನೆಯದು ಅವರು ಬಯಸಿದ್ದರೂ ಸಹ ನಾನು ಅವರನ್ನು ಎಂದಿಗೂ ತಬ್ಬಿಕೊಳ್ಳುವುದಿಲ್ಲ ಎಂದು ಧೋನಿ ವಿರುದ್ಧ ಕಿಡಿಕಾರಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಬಗ್ಗೆ ಯುವರಾಜ್​​ ಸಿಂಗ್​ ಅವರ ತಂದೆ ಯೋಗರಾಜ್​ ಸಿಂಗ್​​​ ಈ ರೀತಿ ಮಾತನಾಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಯೋಗರಾಜ್​ ಸಿಂಗ್ ಧೋನಿ ವಿರುದ್ಧ ಹರಿಹಾಯ್ದಿದ್ದಾರೆ. ಸದ್ಯ ಕಪಿಲ್​ ದೇವ್ ಹಾಗೂ ಎಂ.ಎಸ್.ಧೋನಿ ಇಬ್ಬರನ್ನೂ ಯುವಿ ತಂದೆ ಯೋಗರಾಜ್ ಸಿಂಗ್ ದೂಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ 2007 ರಿಂದ 2013ರವರೆಗಿನ ಐಸಿಸಿ ಈವೆಂಟ್‌ಗಳಲ್ಲಿ ಟೀಮ್​ ಇಂಡಿಯಾದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

- Advertisement -

Latest Posts

Don't Miss