Bollywood News: ತನ್ನ ಅಂತ್ಯವಾದ ಬಳಿಕ ಅಪ್ಪ- ಅಮ್ಮ ಅಥವಾ ಪತ್ನಿ ಮಕ್ಕಳಿಗೆ ಆರ್ಥಿಕ ಸಹಾಯವಾಾಗಲಿ ಎಂದು ಕೆಲವರು ಇನ್ಶೂರೆನ್ಸ್ ಮಾಡಿಸುತ್ತಾರೆ. ಇನ್ನು ಕೆಲವರು ಟಿವಿ, ಕಾರ್, ಬೈಕ್ ಎಲ್ಲದಕ್ಕೂ ಇನ್ಶೂರೆನ್ಸ್ ಮಾಡಿಸುತ್ತಾರೆ. ಆರೋಗ್ಯ ವಿಮೆ ಮಾಡಿಸುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ಆದರೆ ಬಾಲಿವುಡ್ ಸೆಲೆಬ್ರಿಟಿಗಳು, ತಮ್ಮ ದೇಹದ ಅಂಗಾಂಗಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಂಡಿರುತ್ತಾರೆ. ಹಾಗಾದ್ರೆ ಯಾವ ಸೆಲೆಬ್ರಿಟಿ ಯಾವ ಅಂಗಕ್ಕೆ ಇನ್ಶೂರೆನ್ಸ್ ಮಾಡಿಸಿಕೊಂಡಿರುತ್ತಾರೆ ಅಂತಾ ತಿಳಿಯೋಣ ಬನ್ನಿ..
ನೀವು ವಾಯ್ಸ್ ಕೇಳಿದಾಕ್ಷಣ ಇದು ಅಮಿತಾಬಚ್ಚನ್ ವಾಯ್ಸ್ ಎಂದು ಹೇಳಿಬಿಡಬಹುದು. ಅಷ್ಟು ಪ್ರಸಿದ್ಧ ಮತ್ತು ಸ್ಪಷ್ಟವಾಗಿದೆ ಅಮಿತಾಬಚ್ಚನ್ ಕಂಠ. ಹಾಗಾಗಿಯೇ ಅಮಿತಾಬ್ ತಮ್ಮ ಕಂಠಕ್ಕೆ ಇನ್ಶೂರೆನ್ಸ್ ಮಾಡಿಸಿದ್ದಾರೆ. ಅಮಿತಾಬ್ ಕಂಠಕ್ಕೆ ಏನಾದರೂ ತೊಂದರೆಯಾದರೆ, ಅವರು ವಾಯ್ಸ್ ಓವರ್ ಕೊಡಲಿಕ್ಕೆ ಆಗದಿದ್ದಲ್ಲಿ, ಮಾತನಾಡಲು ಕಷ್ಟವಾದಲ್ಲಿ ಅವರಿಗೆ ಕೋಟಿ ಕೋಟಿ ರೂಪಾಯಿ ಇನ್ಶೂರೆನ್ಸ್ ಹಣ ಸಿಗುತ್ತದೆ.
ಅದೇ ರೀತಿ, ರಾಖಿಸಾವಂತ್ ಮತ್ತು ಜಾನ್ ಅಬ್ರಾಹಿಂ ಅವರ ಖಾಸಗಿ ಅಂಗ(ಪೃಷ್ಠ), ಪ್ರಿಯಾಂಕಾ ಛೋಪ್ರಾ ಅವರ ತುಟಿ, ಐಶ್ವರ್ಯಾ ರೈ ಕಣ್ಣುಗಳಿಗೂ ಇನ್ಶೂರೆನ್ಸ್ ಮಾಡಿಸಿಟ್ಟಿದ್ದಾರೆ. ಇವರಷ್ಟೇ ಅಲ್ಲದೇ, ಯಾರ ಆದಾಯ ಅವರ ಅಂಗದ ಮೇಲೆ ಡಿಪೆಂಡ್ ಆಗಿರುತ್ತದೆಯೋ, ಅಂಥವರು ತಮ್ಮ ಅಂಗಗಳಿಗೆ ಇನ್ಶೂರೆನ್ಸ್ ಮಾಡಿಸಬಹುದು.
ಅವರ ಅಂಗಕ್ಕೆ ಏನಾದರೂ ತೊಂದರೆಯಾದಾಗ, ಇನ್ಶೂರೆನ್ಸ್ ಹಣ ಅವರ ಕೈ ಸೇರುತ್ತದೆ. ಆದರೆ ಇದು ಯಾವುದಾದರೂ ಏಜೆಂಟ್ ಥ್ರೂ ನಿಮಗೆ ಸಿಗುವ ಇನ್ಶೂರೆನ್ಸ್ ಅಲ್ಲ. ಬದಲಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಕಟ್ಟಿ, ಸ್ಪೆಶಲ್ ಆಗಿ ಈ ಇನ್ಶೂರೆನ್ಸ್ ನೀವು ಮಾಡಿಸಬೇಕಾಗುತ್ತದೆ. ಆಗ ನಿಮ್ಮ ಅಂಗಕ್ಕೆ ಏನಾದರೂ ಆದರೆ, ನಿಮಗೆ ಕೋಟಿ ಕೋಟಿ ರೂಪಾಯಿ ಸಿಗುತ್ತದೆ.