Political News: ನಿನ್ನೆ ಮಾಧ್ಯಮದ ಜತೆ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕ ಬಂದಾಗ ಆರ್‌ಎಸ್‌ಎಸ್‌ನ್ನು ನೋಡಿಕ“ಳ್ಳುತ್ತೇವೆ ಎನ್ನುವ ಮೂಲಕ, ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಶತಮಾನ ಪೂರೈಸಿರುವ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?
ಬೆಂಗಳೂರಿನಲ್ಲಿಂದು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ನವರಿಗೆ ಜ್ಯಾತ್ಯಾತೀತೆ, ಸಮಾನತೆ, ಸಮಾನ ಅವಕಾಶ ನೀಡಲು ಅವರಿಗೆ ಅಲರ್ಜಿ ಇದೆ. ಆ ಸಂಸ್ಥೆ ಶುರುವಾದಾಗಿಂದಲೂ ಅವರಿಗೆ ಈ ಸಮಾನತೆ ಬಗ್ಗೆ ಅಲರ್ಜಿ ಇದೆ ಎಂದು ಹೇಳಿದ್ದರು.
ನಾವು ಆರ್‌ಎಸ್ಎಸ್ ಅವರ ತತ್ವ ಸಿದ್ಧಾಂತವನ್ನು ಮುಂಚೆಯೂ ವಿರೋಧಿಸಿದ್ದೇವೆ. ಮುಂದೆಯೂ ವಿರೋಧಿಸುತ್ತೇವೆ. ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಆರ್ಎಸ್‌ಎಸ್‌ನ್ನು ನಾವು ಬ್ಯಾನ್ ಮಾಡಿದ್ದೆವು. ಅದನ್ನು ತೆರವುಗ“ಳಿಸಿದ್ದೇ ನಮ್ಮ ತಪ್ಪಾಯಿತು. ಬ್ಯಾನ್ ಮಾಡಿದಾಗ ನಮ್ಮ ಕೈ ಕಾಲು ಹಿಡಿದು ಬಂದಿದ್ದರು. ನಾವು ಇನ್ನು ಮುಂದೆ ದೇಶದ್ರೋಹಿ ಕೆಲಸ ಮಾಡುವುದಿಲ್ಲವೆಂದು ಹೇಳಿದ್ದರು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದಾಗ ನೋಡೋಣವೆಂದು ಖರ್ಗೆ ಪರೋಕ್ಷವಾಗಿ, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಆರ್‌ಎಸಎಸ್ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದರು.
ಜಾತ್ಯಾತೀಯ ಅಂದರೆ ಎಲ್ಲರಿಗೂ ಅವಕಾಶವಿದೆ. ಸಾಮಾಜಿಕ ಸಮಾನತೆ ಎಂದರ್ಥ. ಮೋದಿಯವರು ಭಾಷಣ ಮಾಡುವಾಗ, ಇದು ಜಾತ್ಯಾತೀಯ ಕಾರ್ಯಕ್ರಮ ಅಂತಲೇ ಹೇಳುತ್ತಾರೆ. ಆದರೆ ಹಾಗೆ ನಡೆದುಕ“ಳ್ಳುವುದಿಲ್ಲ. ಇವರಿಗೆ ಜಾತ್ಯಾತೀತತೆ ಅನ್ನೋ ಪದದಿಂದ ಅಲರ್ಜಿ ಇದ್ದರೆ, ಹಾಗೆ ಹೇಳುವುದನ್ನೇ ನಿಲ್ಲಿಸಿಬಿಡಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ಆರ್‌ಎಸ್‌ಎಸ್ ಸಿದ್ಧಾಂತದಲ್ಲಿ ನಾವಷ್ಟೇ ಇರಬೇಕು. 1 ಜಾತಿಯವರು ಮಾತ್ರ ಇರಬೇಕು ಅಂತಾ ಇದೆ. ಅಂಥ ಸಂಸ್ಥೆ ನಿಲ್ಲಿಸಿಬಿಡಲಿ. ಅವರಿಗೆ ನಮ್ಮ ಇತಿಹಾಸ ಓದಲು ಹೇಳಿ. ಅವರಿಂದ ಇತಿಹಾಸ ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಾಗಾಗಿ ಈ ಇತಿಹಾಸ ಸೃಷ್ಟಿಸಲು ಹ“ರಟಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು.