ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಹಕಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಮಾಗಡಿ ತಾಲೂಕಿನ ಬೆಳಗುಂಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿರ್ದೇಶಕರ ಆಯ್ಕೆಗೆ ಜಿದ್ದಾಜಿದ್ದಿನ ಸ್ಪರ್ಧೆ ಇತ್ತು. ಚುನಾವಣೆಯಲ್ಲಿ JDS ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಒಟ್ಟು 11 ನಿರ್ದೇಶಕರ ಸ್ಥಾನದಲ್ಲಿ JDS ಬೆಂಬಲಿತ 9 ನಿರ್ದೇಶಕರು ಜಯಶಾಲಿಗಳಾಗಿದ್ದಾರೆ.
ಮಾಗಡಿಯಲ್ಲಿ ಕಾಂಗ್ರೆಸ್ ಆಡಳಿತ ಇದ್ದು, ಶಾಸಕ ಹೆಚ್ ಸಿ ಬಾಲಕೃಷ್ಣ ಪ್ರತಿನಿಧಿಸಿದ್ದಾರೆ. ಸದ್ಯ ಮಾಗಡಿ ಕಾಂಗ್ರೆಸ್ ಭದ್ರಕೋಟೆ ಆದ್ರೂ ಕೃಷಿ ಪತ್ತಿನ ಚುನಾವಣೆಯಲ್ಲಿ ಜೆಡಿಎಸ್ ಮೆಲುಗೈ ಸಾಧಿಸಿದೆ. ಇದು ಮಾಗಡಿ ರಾಜಕೀಯದ ಲೆಕ್ಕಚಾರಗಳು ಉಲ್ಟಾ ಆಗುವಂತಾಗಿದೆ. ಇರುವ 11 ಸ್ಥಾನಗಳಲ್ಲಿ ಜೆಡಿಎಸ್ ನಿಂದಲೇ ಅಭ್ಯರ್ಥಿಗಳು ಗೆದ್ದಿರುವುದು ಜೆಡಿಎಸ್ ಗೆ ಬಲ ತಂದಂತಾಗಿದೆ.
ಈ ಚುನಾವಣೆಯಲ್ಲಿ ಹೊಸಹಳ್ಳಿ ಹೆಚ್‌ಎಂ ರಂಗನಾಥ್, ನರಸೇಗೌಡ, ಬಿಎಸ್ ಮಂಜುನಾಥ್, ಬಿ ರಾಜ̧ಣ್ಣ, ಗೌರಮ್ಮ ಸೂರಪ್ಪ, ಬಿವಿ ಗಂಗನರಸಿಂಹಯ್ಯ, ರೇಣುಕಯ್ಯ, ಬಿಎಸ್ ಚಂದ್ರಶೇಖರ, ಪುಷ್ಪ, ಗೋಪಾಲ್ ಈ 9 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾದಿಕಾರಿ ಉಮೇಶ್ ತಿಳಿಸಿದ್ದಾರೆ.
ಜೆಡಿಎಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗುತ್ತಿದ್ದಂತೆ ಪಕ್ಷದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಾಗಡಿಯಲ್ಲಿ ಜೆಡಿಎಸ್ ಹವಾ ಇನ್ನು ಇದೆ ಎಂಬುದನ್ನು ತೋರಿಸಿದ್ದಾರೆ. ಜೊತೆಗೆ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಕೂಡ ಸಲ್ಲಿಸಿದ್ದಾರೆ.
ಈ ಸಂಭ್ರಮಾಚಾರಣೆ ವೇಳೆ ಜೆಡಿಎಸ್ ಮುಖಂಡರಾದ ಕೋಟಪ್ಪ, ಹೊನ್ನಪ್ಪ, ಸೂರಪ್ಪ, ನಾಗಣ್ಣ, ವಿಜಯಕುಮಾರ್, ದಂಡಿಗೆಪುರ ಕುಮಾರ್, ಭರತ್, ತಗ್ಗಿಕುಪ್ಪೆ ಪಂಚೆ ರಾಮಣ್ಣ, ಗೌಡ್ರುಪಾಳ್ಯ ಶಿವರಾಂ, ಮಂಜುನಾಥ್, ವಿಶ್ವನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ