Wednesday, February 5, 2025

Latest Posts

ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಡಾರ್ಲಿಂಗ್ ಕೃಷ್ಣ ರೋಮ್ಯಾನ್ಸ್..!

- Advertisement -

ಕನ್ನಡ ಚಿತ್ರರಂಗದ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಟಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿರುವ ಡಿಂಪಲ್ ಕ್ವೀನ್ ಮತ್ತೊಂದು ಸಿನಿಮಾಕ್ಕೂ ಓಕೆ ಎಂದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸಿನಿಮಾದಲ್ಲಿ ರಚ್ಚುಗೆ ಜೋಡಿಯಾಗಿ ಲವ್ ಮೋಕ್ಟೇಲ್ ಸಿನಿಮಾ ಖ್ಯಾತಿಯ ನಿರ್ದೇಶಕ ಕಂ ನಟ ಡಾರ್ಲಿಂಗ್ ಕೃಷ್ಣ ರಚಿತಾ ಜೊತೆ ತೆರೆಮೇಲೆ ಮಿಂಚಲಿದ್ದಾರೆ.

ಲವ್ ಮೋಕ್ಟೇಲ್ ಸಿನಿಮಾ ಸೂಪರ್ ಸಕ್ಸಸ್ ಬಳಿಕ ಸಾಕಷ್ಟು ಬ್ಯೂಸಿಯಾಗಿರೋ ಕೃಷ್ಣ ಬತ್ತಳಿಕೆಯಲ್ಲಿ ನಾಲ್ಕೈದು ಸಿನಿಮಾಗಳಿವೆ. ನಟನೆ ಜೊತೆ ಲವ್ ಮೋಕ್ಟೇಲ್-2 ಸಿನಿಮಾ ನಿರ್ದೇಶನ ಮಾಡ್ತಿರೋ ಕೃಷ್ಣ ರಚಿತಾ ಜೊತೆ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಅಂದಹಾಗೇ ರಚ್ಚು-ಕೃಷ್ಣ ನಟಿಸ್ತಿರೋ ಸಿನಿಮಾ ಹೆಸ್ರು ಏನೋ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಗಿದ್ದು, ನಿರ್ದೇಶಕ ದೀಪಕ್ ಗಂಗಾಧರ್ ಆ್ಯಕ್ಷನ್ ಕಟ್ ಹೇಳ್ತಿರೋ ಮೊದಲ ಸಿನಿಮಾವಿದು. ಲವ್ ಸ್ಟೋರಿ ಕಥೆಯಾಗಿರೋ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಸದ್ಯದಲ್ಲಿಯೇ ಸಿನಿಮಾ ಟೈಟಲ್ ರಿವೀಲ್ ಮಾಡಿದೆ ಚಿತ್ರತಂಡ.

- Advertisement -

Latest Posts

Don't Miss