Sunday, May 26, 2024

Latest Posts

ನಿಮ್ದು ಲಿಂಗಾಯತರನ್ನು ಒಡೆದು ಆಳೋ ನೀತಿ- ದಿಂಗಾಲೇಶ್ವರ ಸ್ವಾಮೀಜಿ ಆರೋಪ..

- Advertisement -

Hubli News: ಹುಬ್ಬಳ್ಳಿ:  ನನ್ನ ಇಡೀ ಟೀಂ ಒಡೆದರೂ ನನ್ನ ಏನೂ ಮಾಡೋಕೆ ಆಗಲ್ಲ. ಯುದ್ಧಭೂಮಿಯಲ್ಲಿ ಎಷ್ಟ ಜನ ಇದ್ರು ಯಾರು ಇದ್ರು ಅನ್ನೋದು ಮುಖ್ಯವಲ್ಲ. ಅರ್ಜುನ ಕೃಷ್ಣ ಇಬ್ಬರೇ ಇದ್ರು ಅನ್ನೋದು ಇತಿಹಾಸ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಮತ್ತೆ ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಮಠಾಧೀಪತಿಗಳು ರಾಜಕಾರಣಕ್ಕೆ ಬರಬಾರದು ಎಂದು ಜೋಶಿ ಅಭಿಮಾನಿಗಳು ಹೇಳುತ್ತಿದ್ದಾರೆ. ಅವರು ಪ್ರಜ್ಞಾವಂತರಲ್ಲ ಜೋಶಿ ಅವರ ಅಭಿಮಾನಿಗಳು. ಎಲ್ಲೂ ನಾನು ರಾಜಕೀಯಕ್ಕೆ ಬರ್ತೀನಿ ಅಂತಾ ಹೇಳಿಲ್ಲ. ನಾವು ಬರಬೇಕು ಎಂಬುದು ಜನರ ಅಭಿಪ್ರಾಯ. ನನ್ನ ಹಿಂದೆ ಬಿಜೆಪಿಯವರು ಇದ್ದಾರೆ,ಕಾಂಗ್ರೆಸ್ ನವರೂ ಇದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪೋಟಕ ಹೇಳಿಕೆ ನೀಡಿದರು.

ನನ್ನ ಜೊತೆ ಎಲ್ಲರೂ ಸಂಪರ್ಕ ಮಾಡಿದ್ದಾರೆ. ಎಲ್ಲ ಪಕ್ಷದ ಪ್ರಮುಖರು ಸಂಪರ್ಕ ಮಾಡಿದ್ದಾರೆ. ನಾನು ಯಾರ ಹೆಸರು ಹೇಳಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಸಂಪರ್ಕ ಮಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ವ್ಯವಸ್ಥೆ ಅಸ್ಥಿರಗೊಂಡಾಗ ಮಠಾಧಿಪತಿಗಳು ಪ್ರವೇಶ ಮಾಡೋದು ಅನಿವಾರ್ಯ, ಇದು ಜನರ ಬಯಕೆ. ನಾವು ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಿಕೊಂಡು‌ ಬಂದಿದ್ದೆವು. ಆದ್ರೆ ರಾಜಕೀಯಕ್ಕೆ ಬರಬೇಕು ಅನ್ನೋದು ಜನರ ಬಯಕೆಯಾಗಿದೆ. ನಾನು ಸ್ಪರ್ಧೆ ವಿಚಾರ ಎಲ್ಲೂ ಹೇಳಿಲ್ಲ. ಸ್ಪರ್ಧೆ ಬಗ್ಗೆ ಬೆಂಗಳೂರಲ್ಲಿ ತೀರ್ಮಾನವಾಗುತ್ತೆ. ಮಠಾಧೀಪತಿಗಳು,ಬುದ್ದಿ ಜೀವಿವಳ ಜೊತೆ ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ‌ ಮಾಡ್ತೀವಿ ಎಂದು ಹೇಳಿದ್ದಾರೆ.

ಜನ‌ ನಮಗೆ ಸ್ಪರ್ಧೆ ಮಾಡಿ ಅಂತಾ ಆಫರ್ ಕೊಟ್ಟಿದ್ದಾರೆ. ಅಕಸ್ಮಾತ್ ‌ಕಾಂಗ್ರೆಸ್‌ ನಿಮಗೆ ಆಫರ್ ಕೊಟ್ರೆ ಏನ‌್ ಮಾಡ್ತೀರಿ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಆಫರ್ ಕೊಟ್ರೆ ನಾವು ವಿಚಾರ ಮಾಡ್ತೀವಿ. ದುಡುಕಿನ ನಿರ್ಧಾರ‌ ಮಾಡಲ್ಲ. ಮೊನ್ನೆ ಸಭೆಯಲ್ಲಿ ಸ್ವಾಮೀಜಿ ಅಭ್ಯರ್ಥಿ ಆಗಬೇಕು ಅನ್ನೋ ತೀರ್ಮಾನ ಬಂದಿದೆ. ನಾನು ಅದಕ್ಕಾಗಿ ಸಮಯ ತಗೆದುಕೊಂಡಿದ್ದೇನೆ. ನಾನು ಚುನಾವಣೆಗೆ ನಿಲ್ತೀನಿ, ಯಾರನ್ನಾದರೂ ನಿಲ್ಲಸ್ತೀನಿ ಅನ್ನೋ ತೀರ್ಮಾನ ಮಾಡಿಲ್ಲ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಕೆಲವು ಮಠಾಧಿಪತಿಗಳು ಒತ್ತಡಕ್ಕೆ ಒಳಗಾಗಿ ಬೇರೆ ತರಹ ಮಾತಾಡ್ತಿದಾರೆ. ಧಾರವಾಡ ಲೋಕಸಭೆಯಿಂದ ಜೋಶಿ ಬದಲಾಗಬೇಕು ಅನ್ನೋ ಬೇಡಿಕೆ ಇತ್ತು. ಇವತ್ತಿಗೂ ಅನೇಕರು ನಮ್ಮನ್ನು ಸಂಪರ್ಕ ಮಾಡಿ ಕ್ಷಮಿಸಿ ಎನ್ನುತ್ತಿದ್ದಾರೆ. ಅವರ ಬದಲಾವಣೆ ಮಾಡೋ‌ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಶ್ವರಪ್ಪ ಅಂತವರನ್ನೆ ನಿರ್ಲಕ್ಷ್ಯ ಮಾಡಿದ್ದಾರೆ. ದೆಹಲಿಗೆ ಬರುವಂತೆ ಹೇಳಿ ಅವರಿಗೆ ಅವಮಾನ ಮಾಡಿದ್ದಾರೆ ಎಂದರು.

ನಾನು ಮಾತಾಡೋದು ಕೇವಲ ಲಿಂಗಾಯತರಿಗೆ ಅನ್ಯಾಯ ಆಗಿಲ್ಲ. ಬೇರೆ ಸಮುದಾಯದವರಿಗೂ ಅನ್ಯಾಯವಾಗಿದೆ. ಇಡೀ ಪಕ್ಷ ಕಡಿಮೆ‌ ಜನ ಸಂಖ್ಯೆ ಇರೋರ ಹಿಡಿತದಲ್ಲಿದೆ. ಇದು ರಾಷ್ಟ್ರೀಯ ಪಕ್ಷಕ್ಕೆ ಒಳ್ಳೆದಲ್ಲ.
ಐದನೇ ಅವಧಿಗೆ ಯಾಕೆ ಜೋಶಿ ಅವರು ಮುಂದುವರೀತಾರೆ. ಕೆಲವರನ್ನು ಎರಡು ಮೂರು ಅವಧಿಗೆ ಬದಲಾಗವಣೆ ಮಾಡಿದ್ದಾರೆ. ಕೆಲ ಲಿಂಗಾಯತ ಮುಖಂಡರನ್ನು ಆಕರ್ಷಣೆ ಮಾಡಿ ನಮ್ಮ ವಿರುದ್ದ ಮಾತಾಡುವಂತೆ ಮಾಡಿದ್ದಾರೆ.‌ ನಿಮಗೆ ನಾಡಿನ ಹಿತ‌ ಮುಖ್ಯವೋ, ಜೋಶಿ ಅವರ ಹಿತ ಮುಖ್ಯವೋ..? ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

ನಿಮ್ಮ ಸಮಾಜದಲ್ಲಿ ಸ್ವಾಮೀಜಿಗಳೂ ಇದ್ದಾರೆ. ಅವರ ಹೇಳಿಕೆ ಕೊಡಿಸಿ. ಲಿಂಗಾಯತರ ವಿರುದ್ದ ಲಿಂಗಾಯತರನ್ನು ಎತ್ತಿ ಕಟ್ಟಿದ್ದೀರಿ. ಇದು‌ ಲಿಂಗಾಯತರನ್ನು ಒಡೆದು ಆಳೋ ನೀತಿ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ತಗೆದುಕೊಳ್ಳುವ ನಿಲುವು ಕೇವಲ ಧಾರವಾಡಕ್ಕೆ ಸೀಮಿತವಲ್ಲ. ನನ್ನ‌ ನಿಲುವು,ರಾಜ್ಯಕ್ಕೆ,ರಾಷ್ಟ್ರಕ್ಕೆ ಪರಿಣಾಮ ಉಂಟು ಮಾಡುತ್ತೆ. ಶೀಘ್ರದಲ್ಲೇ ಒಂದು ನಿರ್ಧಾರ ಪ್ರಕಟ ಮಾಡ್ತೀನಿ. ಶೀಘ್ರದಲ್ಲಿಯೇ ನಾವು ಬಹಿರಂಗಕ್ಕೆ ಬರ್ತಿವಿ. ದೆಹಲಿ ಮಟ್ಟದ ನಾಯಕರು ಯಾರೂ ನಮ್ಮ ಸಂಪರ್ಕಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

DK Shivakumar : ‘ಎಷ್ಟು ದಿನ ರಾಜಕೀಯದಲ್ಲಿರುತ್ತೇನೋ ಗೊತ್ತಿಲ್ಲ’ : ಡಿಕೆಶಿ ಅಚ್ಚರಿ ಮಾತು..!

CT Ravi : ಶಾಸಕರನ್ನು ತೃಪ್ತಿ ಪಡಿಸಲು ಸೂಟ್​ಕೇಸ್ ಕೊಡ್ತಿದ್ದಾರೆ : ಸಿ.ಟಿ ರವಿ

Sumalatha : ಸುಮಲತಾಗೆ ದರ್ಶನ್ ,ಯಶ್ ಬೆಂಬಲ ಸಿಗುತ್ತಾ..?! : ಸುಮಲತಾ ನೀಡಿದ ಉತ್ತರವೇನು?

- Advertisement -

Latest Posts

Don't Miss